ಬೆಂಗಳೂರು,ಮಾ.7-ಕೆಎಸ್‍ಡಿಎಲ್ ಲಂಚ ಪ್ರಕರಣದಲ್ಲಿ ಮೊದಲನೆ ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಇದುವರೆಗೂ ನಾಪತ್ತೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೋಸ್ಟರ್ ಪಾಲಿಟಿಕ್ಸ್‍ಗೆ ಮುಂದಾಗಿದ್ದಾರೆ.
ವಿರೂಪಾಕ್ಷಪ್ಪ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರೂ ಅವರು ಇದುವರೆಗೂ ಪೋಲೀಸರಿಂದ ಬಂಧಿಸಲು ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿರುವ ಕೈ ಕಾರ್ಯಕರ್ತರು ನಗರದ ಹಲವೆಡೆ ಗೋಡೆಗಳ ಮೇಲೆ ಮಾಡಾಳ್ ವಿರೂಪಾಕ್ಷಪ್ಪ ಇರುವ ಪೋಸ್ಟರ್ ಅಂಟಿಸಿ ಅವರನ್ನು ಹುಡುಕಿಕೊಡಿ ಎಂಬ ಅಭಿಯಾನ ಆರಂಭಿಸಿದೆ.
ಗೋಡೆ ಹಾರಿ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್ ಖಾನ್
ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ.
ಎತ್ತರ- 5.9 ,
ವಯಸ್ಸು- 72,
ಕೊನೆಯಬಾರಿ ಕಾಣಿಸಿದ್ದು- ಸಿಎಂ ಕಚೇರಿ
ನಾಪತ್ತೆಯಾದ ದಿನಾಂಕ- 4/03/2023 ಎಂಬ ಭಿತ್ತಿಪತ್ರ ಅಂಟಿಸಿ
ಕೆಎಸ್‍ಡಿಎಲ್ ಲಂಚ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಎ-1 ಆರೋಪಿಯನ್ನು ದಯಮಾಡಿ ಹುಡುಕಿಕೊಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಈ ರೀತಿಯ ಭಿತ್ತಿಪತ್ರಗಳನ್ನು ಯಶವಂತಪುರ ಸೇರಿದಂತೆ ನಗರದ ಹಲವಾರು ಪ್ರದೇಶಗಳಲ್ಲಿ ಅಂಟಿಸಲಾಗಿದೆ.
MLA, Madal Virupakshappa, missing, Poster,