ಬೆಂಗಳೂರು,ಫೆ.15- ಉಡುಪಿ ಜಿಲ್ಲಾ ಮಟ್ಟದಲ್ಲಿ ಯಾವುದೇ ರೀತಿಯ ಸಮಸ್ಯೆಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಸಭೆಯನ್ನು ಸಹ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಇರುವುದೇ ಶಿಕ್ಷಕರಿಗೂ ಅನ್ವಯವಾಗುತ್ತದೆ ಎಂದು ಹಿಜಾಬ್-ಕೇಸರಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ನಮ್ಮ ಸರ್ಕಾರಿ ಶಾಲೆಯಲ್ಲೇ ಹಿಜಾಬ್ ವಿವಾದ ಉಂಟಾಗಿತ್ತು. ಒಂದು ಕೋಮಿನ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು. ಪ್ರತಿಭಟನೆ ಮಾಡಿದವರು ಶೇ.1ರಷ್ಟು ಇಲ್ಲ. ಹೀಗಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
