ನಾಳೆ ಮಲೆನಾಡಿಗರ ಸ್ನೇಹ ಶೃಂಗ-2023

Social Share

ಬೆಂಗಳೂರು, ಮಾ.3- ರಾಜಧಾನಿಯಲ್ಲಿ ನೆಲೆಸಿ ಹುಟ್ಟಿದ ಊರಿಗೆ ಗೌರವ ತರುತ್ತಿರುವ ಶೃಂಗೇರಿ ಕ್ಷೇತ್ರದ ಮಲೆನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಳೆ ಸಂಜೆ 6 ಗಂಟೆಗೆ ಸ್ನೇಹಶೃಂಗ ಸಂಘದಿಂದ ನಗರದ ಆನಂದರಾವ್ ವೃತ್ತದಲ್ಲಿರುವ ಕೆಇಬಿ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಶೃಂಗೇರಿ, ನ. ರಾ.ಪುರ ತಾಲೂಕು, ಖಾಂಡ್ಯ ಹೋಬಳಿ ಹಾಗೂ ಮಲೆನಾಡಿನ ಅಸಂಖ್ಯಾತ ಜನರು ರಾಜಧಾನಿ ಬೆಂಗಳೂರಿ ನಲ್ಲಿ ನೆಲೆನಿಂತು ಉದ್ಯೋಗ, ವ್ಯವಹಾರ ಗಳ ಮುಖೇನ ತಮ್ಮದೇ ಆದ ಛಾಪು ಮೂಡಿಸಿ ಹುಟ್ಟಿದ ಊರಿಗೆ ಗೌರವ ತರುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಸಂವಾದ ನಡೆಸುವ ಸಲುವಾಗಿ ಆತ್ಮೀಯರ ಸಹಕಾರದೊಂದಿಗೆ ಸ್ನೇಹಶೃಂಗ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಹಾಗೂ ಸ್ನೇಹ ಶೃಂಗದ ಗೌರವಾಧ್ಯಕ್ಷರಾದ ಟಿ.ಡಿ. ರಾಜೇಗೌಡ ಅವರು ತಿಳಿಸಿದ್ದಾರೆ.

ಕೂಡಲೇ ವಿಧಾನಸಭೆ ಚುನಾವಣೆ ಘೋಷಣೆ ಮಾಡಲು ಸಿದ್ದರಾಮಯ್ಯ ಒತ್ತಾಯ

ಕಾರ್ಯಕ್ರಮದಲ್ಲಿ ಮಲೆನಾಡಿಗರು ಒಂದೆಡೆ ಸೇರಿ ತಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಲಾಗಿದೆ.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಟಿ.ಡಿ.ರಾಜೇಗೌಡರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

MLA rajegowda, malenadu, Friendship,

Articles You Might Like

Share This Article