ಜಮೀರ್ ಅಹಮದ್ ವಿರುದ್ಧ ಗುಡುಗಿದ ರೇಣುಕಾಚಾರ್ಯ

ದಾವಣಗೆರೆ, ಸೆ.12- ಶಾಸಕ ಜಮೀರ್ ಅಹಮದ್ ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ. ಹೊನ್ನಾಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಹೇಳೋದೆಲ್ಲಾ ಸುಳ್ಳು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಏನಾದ್ರು ಮುಖ್ಯಮಂತ್ರಿ ಆದರೆ ಅವರ ಮನೆ ವಾಚ್‍ಮನ್ ಆಗುತ್ತೇನೆ ಎಂದಿದ್ದರು.

ಈಗ ಬಿಎಸ್‍ವೈ ಸಿಎಂ ಆಗಿದ್ದಾರೆ. ಜಮೀರ್ ಹೇಳಿದಂತೆ ನಡೆದು ಕೊಂಡಿದ್ದಾರೆಯೇ ? ವಾಚ್‍ಮನ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಜಮೀರ್‍ಗೆ ಒಂದೇ ನಾಲಿಗೆ ಇಲ್ಲ. ಅವರು ಎರಡು ನಾಲಿಗೆ ಇರುವ ವ್ಯಕ್ತಿ. ಅದಕ್ಕೆ ಹೇಗೆ ಬೇಕೋ ಹಾಗೆಲ್ಲ ಹೇಳಿಕೆ ನೀಡುತ್ತಾರೆ ಎಂದರು.

ಅಕ್ರಮ ಚಟುವಟಿಕೆಗಳಿಂದಲೇ ಜಮೀರ್ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪಿತಸ್ಥರು ಶಿಕ್ಷೆ ಅನುಭವಿಸಲೇಬೇಕು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ರೇಣುಕಾಚಾರ್ಯ ಉತ್ತರಿಸಿದರು. ಡ್ರಗ್ಸ್ ಪ್ರಕರಣ ಸಂಬಂಧ ಸರ್ಕಾರ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಸಂಪೂರ್ಣ ತನಿಖೆ ನಡೆದು ಸತ್ಯಾಂಶ ಹೊರ ಬರಲಿದೆ ಎಂದು ಅವರು ತಿಳಿಸಿದ್ದಾರೆ.