ತುಮಕೂರು,ಡಿ.31- ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಜಿದ್ದಾಜಿದ್ದಿನ ರಾಜಕಾರಣ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಸುರೇಶ್ ಗೌಡ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಕರೆ ಮಾಡಿ, ಹಾಲಿ ಶಾಸಕರ ಆಪ್ತ ಸಹಾಯಕನನ್ನು ಬಂಧಿಸಿ, ಕಾಲಿಗೆ ಗುಂಡು ಹೊಡೆಯಬೇಕು ಎಂದು ಧಮಕಿ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಈ ಮೊದಲು ಸುರೇಶ್ ಗೌಡ ಅವರ ಹಲವು ವಿಡಿಯೋಗಳು, ಸಂಭಾಷಣೆಗಳು ವೈರಲ್ ಆಗಿ, ವಿವಾದ ಸೃಷ್ಟಿಸಿದ್ದವು. ಈಗ ಅದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸ್ ಅಧಿಕಾರಿಗೆ ದೂರವಾಣಿ ಕರೆ ಮಾಡಿರುವ ಸುರೇಶ್ ಗೌಡ, ಅಸಭ್ಯ ಭಾಷೆ ಬಳಸಿ ಮಾತನಾಡಿರುವುದು, ಶಾಸಕರ ಆಪ್ತ ಸಹಾಯಕ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಅವಾಚ್ಯ ಶಬ್ಧಗಳಲ್ಲಿ ನಿಂದನೆ ಮಾಡಿರುವುದು ಕಂಡು ಬರುತ್ತಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರ ಮೊದಲಿನಿಂದಲೂ ಜಟಾಪಟಿಗೆ ಹೆಚ್ಚು ಗಮನ ಸೆಳೆದಿದೆ. ಜೆಡಿಎಸ್ ನಾಯಕ ಹಾಗೂ ಹಾಲಿ ಶಾಸಕ ಗೌರಿಶಂಕರ ಮತ್ತು ಬಿಜೆಪಿ ನಾಯಕರೂ ಆಗಿರುವ ಮಾಜಿ ಶಾಸಕ ಸುರೇಶ್ ಗೌಡ ಅವರ ನಡುವೆ ಪರಸ್ಪರ ಹಲವು ಬಾರಿ ಜಿದ್ದಾಜಿದ್ದಿ ನಡೆದಿದೆ. ಈ ಬಾರಿ ಅದೇ ರೀತಿಯ ಮತ್ತೊಂದು ಸಂಘರ್ಷ ಕಂಡು ಬಂದಿದೆ.
ಉಗ್ರರ ಫ್ಯಾಕ್ಟರಿ ಪಾಕ್ ವಿರುದ್ಧ ಜೈಶಂಕರ್ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇತ್ತೀಚೆಗೆ ತುಮಕೂರು ಗ್ರಾಮಾಂತರ ಕ್ಷೇತ್ರ ಊರ್ಡಿಗೆರೆ ಬಳಿಯ ಬ್ಯಾತದಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದರು. ಆ ವೇಳೆ ಜೆಡಿಎಸ್ನವರು ಹಾಕಿದ್ದ ಪ್ಲೆಕ್ಸ್ ಅನ್ನು ಕೆಲವರು ಹರಿದು ಹಾಕಿದ್ದಾರೆ ಮತ್ತು ಬಿಜೆಪಿ ಫ್ಲೆಕ್ಸ್ ಅನ್ನು ಹಾಕಿಸಿದ್ದಾರೆ ಎಂಬ ಆರೋಪಗಳಿವೆ.
ಇದಕ್ಕಾಗಿ ಶಾಸಕ ಗೌರಿ ಶಂಕರ ಅವರ ಆಪ್ತ ಸಹಾಯಕ ನೆಲಮಂಗಲದ ಸುರೇಶ್ ಎಂಬುವರು ಬಿಜೆಪಿ ಕಾರ್ಯಕರ್ತರನ್ನು ನಿಂದಿಸಿ, ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪಂಚರತ್ನ ಯಾತ್ರೆ ಮುಗಿದ ಬಳಿಕ ಬಿಜೆಪಿಯವರು ತಮ್ಮ ಪಕ್ಷದ ಫ್ಲೆಕ್ಸ್ ಹಾಕಿಕೊಳ್ಳಬಹುದಿತ್ತು ಎಂದು ಸುರೇಶ್ ಗದರಿದ್ದಾಗಿ ಹೇಳಲಾಗಿದೆ.
ಬೆದರಿಕೆಯಿಂದ ಕೆರಳಿದ ಮಾಜಿ ಶಾಸಕ ಸುರೇಶ್ ಗೌಡ. ಜೆಡಿಎಸ್ನವರು ಇಲ್ಲಿ ಬಂದು ದಬ್ಬಾಳಿಕೆ ಮಾಡುತ್ತಾರಾ. ನಾನು ಗಂಡಸ್ಸಾಗಿಯೇ ಹುಟ್ಟಿದ್ದೇನೆ. ಎರಡು ಬಾರಿ ಎಂಎಲ್ಎ ಆಗಿ ಕೆಲಸ ಮಾಡಿದ್ದೇನೆ ಎಂದು ಅವಾಜ್ ಹಾಕಿದ್ದಾರೆ.
ವಿಡಿಯೋದಲ್ಲಿ ಇರುವ ಪ್ರಕಾರ, ಸುರೇಶ್ ಗೌಡ ದೂರವಾಣಿಯಲ್ಲಿ ಮಾತನಾಡುತ್ತಿದ್ದಾರೆ. ಮನೆಯಲ್ಲಿ ಇನ್ನೂ ಕೆಲವರು ಕುಳಿತಿದ್ದಾರೆ. ಒಂದೇ ಸಮನೇ ಆಕ್ರೋಶ ಭರಿತರಾಗಿ ಸೂಚನೆಗಳನ್ನು ನೀಡುತ್ತಿರುವ ಮಾಜಿ ಶಾಸಕರು, ಸುರೇಶ್ನನ್ನು ಒದ್ದು ಎಳೆದುಕೊಂಡು ಬನ್ನಿ, ಸರಿಯಾದ ಸೆಕ್ಸನ್ ಹಾಕಿ ಬಂಧಿಸಬೇಕು, ಕಾಲಿಗೆ ಗುಂಡು ಹೊಡೆಯಬೇಕು ಎಂದು ದಬಾವಣೆಯ ಮಾತುಗಳನ್ನಾಡಿದ್ದಾರೆ.
ಏನೆಂದುಕೊಂಡಿದ್ದಾರೆ ನನ್ನ, ಕುಮಾರಸ್ವಾಮಿ ಬಂದಾಗಲೇ ನಮ್ಮವರನ್ನು ಅವರ ಕಾರಿಗೆ ಅಡ್ಡಲಾಗಿ ಮಲಗಿಸಿ ಬಿಡುತ್ತಿದ್ದೆ. ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ, ಗೌರವ ಕಳೆಯ ಬಾರದು ಎಂದು ಅವಡುಚ್ಚಿ ಸುಮ್ಮನೇ ಹೋಗಿದ್ದೇನೆ.
ಚಾಲಕನಿಗೆ ಹೃದಯಘಾತವಾಗಿ ಕಾರಿಗೆ ಗುದ್ದಿದ ಬಸ್, ಒಂಬತ್ತು ಮಂದಿ ಸಾವು
ನಾನು ಎರಡು ಬಾರಿ ಶಾಸಕಗಿರಿ ಮಾಡಿದ್ದೇನೆ. ಗಂಡಸ್ಸಾಗಿಯೇ ಹುಟ್ಟಿದ್ದೇನೆ. ಇಲ್ಲಿ ಬಂದು ದಬ್ಬಾಳಿಕೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಬಂಸದಿದ್ದರೆ ಪೊಲೀಸ್ ಠಾಣೆಯ ಮುಂದೆ ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇನೆ.
ಈಗಾಗಲೇ ಒಮ್ಮೆ ಪ್ರತಿಭಟನೆ ಮಾಡಿದ್ದೇನೆ. ಮತ್ತೊಮ್ಮೆ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಜಿ ಶಾಸಕರು ದೂರವಾಣಿಯಲ್ಲಿ ಮಾತನಾಡುವಾಗ ಆ ಭಾಗದಿಂದ ಸಂಪರ್ಕದಲ್ಲಿವರನ್ನು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂದು ಹೇಳಲಾಗಿದೆ.
#Tumkur, #SureshGowda, #videoviral, #policeinspector,