ಮೈಸೂರು,ಫೆ.28- ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ ಶಾಸಕ ತನ್ವೀರ್ ಸೇಠ್ ಅವರ ನಿರ್ಧಾರ ವಿರೋಧಿಸಿ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ ಶಾಸಕ ತನ್ವೀರ್ ಸೇಠ್ ಅವರ ಮೈಸೂರು ನಿವಾಸದ ಸಮೀಪ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನ್ವೀರ್ ಸೇಠ್ ನಿರ್ಧಾರಕ್ಕೆ ಬೇಸತ್ತ ಅಭಿಮಾನಿಗಳು ಮೈಸೂರಿನ ಉದಯಗಿರಿಯಲ್ಲಿರುವ ನಿವಾಸದ ಬಳಿ ಜಮಾಯಿಸಿದ್ದಾರೆ.
ಈ ವೇಳೆ ಓರ್ವ ಅಭಿಮಾನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ತನ್ವೀರ್ ಸೇಠ್ ಮನೆಯ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ನಿರ್ಧಾರವನ್ನ ಬದಲಾಯಿಸಬೇಕು ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಬೇಕು ಎಂದು ತನ್ವೀರ್ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ..? : ಡಿಕೆಶಿ
ತನ್ವೀರ್ ಸೇಠ್ ಚುನಾವಣೆಯಲ್ಲಿ ಸ್ರ್ಪಧಿಸದಿದ್ದರೆ ನಾವೆಲ್ಲ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಮಾನಿಗಳು ಎಚ್ಚರಿಸಿದ್ದಾರೆ.
ತನ್ವೀರ್ ಸೇಠ್ ನಿವಾಸದ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಬಲಿಗರನ್ನು ಸಮಾಧಾನಪಡಿಸಲು ತನ್ವೀರ್ ಸೇಠ್ ಹರಸಾಹಸಪಟ್ಟಿದ್ದಾರೆ. ಅಭಿಮಾನಿಗಳ ಪಟ್ಟಿಗೆ ತನ್ವೀರ್ ಸೇಠ್ ಸ್ಪಂದಿಸುತ್ತಾರಾ ಅಥವಾ ತಮ್ಮ ನಿಲುವಿಗೆ ಬದ್ಧರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
MLA, Tanveer Seth, election, politics, retirement, fan, attempted, suicide,