ಬೆಂಗಳೂರು,ಸೆ.19- ವಂಚನೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಹಾಲಶ್ರೀ ಸ್ವಾಮೀಜಿ ತಮ್ಮ ವೇಷ ಬದಲಿಸಿ ಖಾವಿ ತೆಗೆದು ಟೀ-ಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಪ್ರಕರಣ ಹೊರ ಬರುತ್ತಿದ್ದಂತೆ ಮಠದಿಂದ ಸ್ವಾಮೀಜಿ ಮೈಸೂರಿಗೆ ಹೋಗಿ ಅಲ್ಲಿನ ಮಠವೊಂದರಲ್ಲಿ ಒಂದು ರಾತ್ರಿ ಕಳೆದು ನಂತರ ಕಾರು ಚಾಲಕನಿಂದ ನಾಲ್ಕು ಹೊಸ ಸಿಮ್‍ಗಳು ಹಾಗೂ ತಲೆಮರೆಸಿಕೊಳ್ಳಲು ಖರ್ಚಿಗೆ ಬೇಕಾದಂತಹ ಹಣವನ್ನು ತರೆಸಿಕೊಂಡಿದ್ದರು. ನಂತರ ಮೈಸೂರಿನಿಂದ ಹೈದರಾಬಾದ್‍ಗೆ ಹೋಗಿ ಅಲ್ಲಿಂದ ಶ್ರೀಶೈಲಕ್ಕೆ ತೆರಳಿದ್ದು, ಅಲ್ಲಿಂದಲೂ ಜಾಗ ಬದಲಿಸಿ ಒಡಿಶಾಕ್ಕೆ ಹೋಗಿದ್ದಾರೆ. ಪ್ರತಿಯೊಂದು ಕಾಲ್‍ಗೂ ಮೊಬೈಲ್ ಸಿಮ್ ಬದಲಿಸುತ್ತಿದ್ದರು. ಒಂದು ಸಿಮ್ ಬಳಸಿದ ನಂತರ ಆ ಸಿಮ್‍ನ್ನು ಮತ್ತೆ ಬಳಸುತ್ತಿರಲಿಲ್ಲ. ಹಾಗಾಗಿ ಇವರ ಬಂಧನ ಪೊಲೀಸರಿಗೆ ತಲೆನೋವಾಗಿತ್ತು.
ಸಚಿವ ರಾಜಣ್ಣ 3 ಡಿಸಿಎಂ ಹೇಳಿಕೆಗೆ ದ್ವನಿಗೊಡಿಸಿದ ಗೃಹ ಸಚಿವ ಪರಮೇಶ್ವರ್
ಸ್ವಾಮೀಜಿಯ ಕಾರು ಚಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ವಾಮೀಜಿಯ ಬಗ್ಗೆ ಕೆಲವೊಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಹಾಲಶ್ರೀ ಸ್ವಾಮೀಜಿ ಕರ್ನಾಟಕದ ಆಪ್ತರೊಬ್ಬರಿಗೆ ಫೋನ್ ಮಾಡಿದ್ದರು. ಆ ಲೊಕೇಶನ್ ಮೂಲಕ ಪೊಲೀಸರು ಸ್ವಾಮೀಜಿ ತಲೆ ಮರೆಸಿಕೊಂಡಿರುವ ಜಾಗವನ್ನು ಪತ್ತೆಹಚ್ಚಿದ್ದರು. ಆ ಲೋಕೆಶನ್ ಟ್ರೇಸ್ ಮಾಡಿ ಹಾಲಶ್ರೀ ಸ್ವಾಮೀಜಿಯನ್ನು ಖೆಡ್ಡಾಗೆ ಬೀಳಿಸಿಕೊಳ್ಳಲು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
MLAticket, #fraudcase, #Abhinava, #HalashreeSwamiji, #arrested,