ಎರಡು ದಿನ ಶಾಸಕರಿಗೆ ತರಬೇತಿ ಶಿಬಿರ

Social Share

ಬೆಂಗಳೂರು, ಫೆ.2- ವಿಧಾನ ಪರಿಷತ್ ಸದಸ್ಯರಿಗೆ ಎರಡು ದಿನ ಶಾಸಕಾಂಗದ ವಿವಿಧ ವಿಷಯಗಳಿಗೆ ಸಂಬಂಸಿದಂತೆ ತರಬೇತಿ ಶಿಬಿರ ಆಯೋಜಿಸಲಾಗಿದೆ.ನಾಳೆ ಮತ್ತು ಫೆಬ್ರವರಿ 4ರಂದು ವಿಕಾಸಸೌಧದ ಕೊಠಡಿ ಸಂಖ್ಯೆ 419ರಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಅಕೃತ ಮೂಲಗಳು ತಿಳಿಸಿವೆ.
ತರಬೇತಿ ಶಿಬಿರಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ವಿಧಾನಸಭೆ ಸದಸ್ಯರು ಹಾಜರಾಗುವ ಮೂಲಕ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ 25 ಸದಸ್ಯರು ಆಯ್ಕೆಯಾಗಿದ್ದರು. ಆ ಹಿನ್ನೆಲೆಯಲ್ಲಿ ಶಾಸಕರಿಗೆ ಶಾಸಕಾಂಗದ ವಿಷಯಗಳಿಗೆ ಸಂಬಂಸಿದಂತೆ ತರಬೇತಿ ಶಿಬಿರ ಆಯೋಜಿಸಲಾಗಿದೆ.

Articles You Might Like

Share This Article