ನಾನು ‘ವೇಶ್ಯೆ’ ಪದ ಬಳಕೆ ಮಾಡಿಲ್ಲ : ಬಿ.ಕೆ.ಹರಿಪ್ರಸಾದ್

Social Share

ಬೆಂಗಳೂರು,ಜ.20- ನಾನು ವೇಶ್ಯೆ ಪದ ಬಳಕೆ ಮಾಡಿಲ್ಲ. ನಾನು ಆ ಪದ ಬಳಕೆ ಮಾಡಿರುವುದನ್ನು ಸಾಬೀತು ಪಡಿಸಿದರೆ ವಿಧಾನಪರಿಷತ್ ಸ್ಥಾನ ಮತ್ತು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.

ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನನಗೆ ಲೈಂಗಿಕ ಕಾರ್ಯಕರ್ತರ ಬಗ್ಗೆ ಅಪಾರ ಗೌರವ ಇದೆ. ನಾನು ಆಕ್ಷೇಪಾರ್ಹ ನನ್ನ ಭಾಷಣದಲ್ಲಿ ವೇಶ್ಯೆ ಎಂಬ ಪದ ಬಳಕೆ ಮಾಡಿರಲಿಲ್ಲ. ಆದರೆ ಮಾಧ್ಯಮದಲ್ಲಿ ನಾನು ಪದ ಬಳಕೆ ಮಾಡಿದ್ದೇನೆ ಎಂದು ವರದಿ ಪ್ರಕಟವಾಗಿತ್ತು. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ ಎಂದರು.

ಇಷ್ಟು ವರ್ಷದ ತಮ್ಮ ರಾಜಕೀಯ ಜೀವನದಲ್ಲಿ ಎಲ್ಲಿಯೂ ನಾನು ಮಿಸ್ ಅಸಭ್ಯವಾಗಿ ವರ್ತಿಸಿದ ಉದಾಹರಣೆ ಇಲ್ಲ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಗೌರವ ಇದೆ. ವೇಶ್ಯೆ ಎಂಬ ಪದ ಬಳಸಿದ ಫೂಟೇಜ್ ಕೊಟ್ಟರೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದರು.

ಪಕ್ಷಾಂತರ ಮಾಡುವುದು ಯಾವ ಸಂದರ್ಭದಲ್ಲಿ? ರಾಜ್ಯದಲ್ಲಿ ಒಂದು ವರ್ಷಗಳ ಕಾಲ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಒಂದೂವರೆ ವರ್ಷ ಎಲ್ಲವನ್ನು ಅನುಭವಿಸಿ ಮಂತ್ರಿ ಆಗಬೇಕು ಎಂದು ಮಾರಾಟವಾದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ

ಪಕ್ಷಕ್ಕೆ ನಿಷ್ಟಾವಂತನಾಗಿ ಕೆಲಸ ಮಾಡಿದ್ದೇನೆ. ಧರ್ಮಸ್ಥಳದ ವಿರೇಂದ್ರ ಹೆಗಡೆಯವರು ಕಾಲೇಜಿನಲ್ಲಿ ನನ್ನ ಸೀನಿಯರ್ ಆಗಿದ್ದರು. ಭಾರತ್ ಸೇವಾದಳದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಎಲ್ಲ ರಾಜ್ಯದಲ್ಲೂ ಪ್ರವಾಸ ಮಾಡುವ ಅವಕಾಶ ಸಿಕ್ಕಿದೆ. 19 ರಾಜ್ಯಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನಾನು ಚುನಾವಣಾ ಚಾಣಕ್ಯ ಅಲ್ಲ, ಚುನಾವಣಾ ಚಾಣಕ್ಯರು ಬೇರೆ ಇದ್ದಾರೆ ಎಂದು ಲೇವಡಿ ಮಾಡಿದರು.

ಸೋನಿಯಾ ಗಾಂಧಿಯವರು ನನಗೆ ಬಹಳಷ್ಟು ಅವಕಾಶ ನೀಡಿದರು. ರಾಷ್ಟ್ರ ರಾಜಕೀಯದಿಂದ ವಾಪಸ್ ರಾಜ್ಯಕ್ಕೆ ಬಂದು ಕಾಂಗ್ರೆಸ್ ಬೆಳೆಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದ ಬಿಜೆಪಿ ವೈಖರಿ ನೋಡಿದಾಗ ಹತಾಶರಾಗಿರುವುದು ಗೋತ್ತಾಗುತ್ತದೆ. ಇವರ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ ಎಂಬುದು ಸ್ಪಷ್ಟವಾಗಿದೆ.

ಡಬಲ್ ಇಂಜಿನ್ ಇದ್ದರೂ ಬಿಜೆಪಿಯಿಂದ ರಾಜ್ಯಕ್ಕೆ ಯಾವುದೇ ಯೋಜನೆಗಳೂ ಬರಲಿಲ್ಲ. ಅನುದಾನ ಮತ್ತು ಯೋಜನೆಗಳನ್ನು ರಾಜ್ಯಕ್ಕೆ ತರುವ ವಿಚಾರ ಬಿಡಿ, ನಮ್ಮ ಹಣವನ್ನೇ ವಾಪಸ್ ತರಲು ಬಿಜೆಪಿಯವರಿಗೆ ಸಾಧ್ಯವಾಗಲಿಲ್ಲ.

ಬಸವರಾಜ ಬೊಮ್ಮಾಯಿಯವರಿಂದಲೂ ಕೇಂದ್ರದಿಂದ ಹಣಕಾಸಿನ ನೆರವು ತರಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ರಾಜ್ಯದ ಜನರು ಮೂಕ ಪ್ರೇಕ್ಷಕರಂತೆ ನೋಡಿಕೊಂಡಿರಬೇಕಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ವೈಯಕ್ತಿಕವಾಗಿ ಪರಿಚಯವಿದ್ದಾರೆ. ಅವರ ಸಂಪೂರ್ಣ ಜಾತಕ ಹೇಳುವ ಧೈರ್ಯ ಮತ್ತು ಮಾಹಿತಿ ನನಗೆ ಇದೆ. ಬಿಜೆಪಿಗೆ ಆ ಧೈರ್ಯ ಇಲ್ಲ. ಗುಜರಾತ್‍ನಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳುವ ಧೈರ್ಯ ಬಿಜೆಪಿಗೆ ಇಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಸ್ತೆ, ಚರಂಡಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಕರೆ ನೀಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವ ಧೈರ್ಯ ಬಿಜೆಪಿಗೆ ಇಲ್ಲ ಎಂದು ಸವಾಲು ಹಾಕಿದರು.

ಪೊಲೀಸ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ

ಚುನಾವಣಾ ದೃಷ್ಟಿಯಿಂದ ಮೂರು ವಾರಕ್ಕೊಂದು ಕೋಮು ಗಲಭೆ ನಡೆಯುತ್ತಿರುವುದನ್ನು ಕಂಡಿದ್ದೇವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಜ್ಯದಲ್ಲೂ ಶಿಕ್ಷಣದ ಗುಣಮಟ್ಟ ಕುಸಿದಿದೆ. ನಾವೆಲ್ಲಾ ಪೆನ್ನು, ಪುಸ್ತಕಗಳ ಬಗ್ಗೆ ಮಾತನಾಡಿದರೆ, ಬಿಜೆಪಿಯ ಪ್ರಜ್ಞಾ ಠಾಕೂರ್ ಚಾಕು, ಚೂರಿ ಬಗ್ಗೆ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಅಮಿತ್ ಶಾ ರಾಜ್ಯಕ್ಕೆ ಬಂದು ಗುಜರಾತ್‍ನ ಅಮುಲ್ ಮತ್ತು ಇಲ್ಲಿನ ಕೆಎಂಎಫ್ ವಿಲೀನ ಮಾಡುವ ಬಗ್ಗೆ ಮಾತನಾಡುತ್ತಾರೆ. ಅಮಿತ್ ಶಾ ರಾಜ್ಯಕ್ಕೆ ವ್ಯಾಪರ ಮಾಡುವುದಕ್ಕೆ ಚಾಣಾಕ್ಷತನದಿಂದ ಬಂದಿದ್ದಾರೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ. ಈ ಹಿಂದೆ ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಏಕೆ ಬರಲಿಲ್ಲ. ಕೋವಿಡ್‍ನಿಂದ ಜನ ಸಂಕಷ್ಟಕ್ಕೆ ಸಿಲುಕಿದಾಗಲೂ ಮೋದಿ ಬಂದಿರಲಿಲ್ಲ. ಚುನಾವಣೆ ಬರುತ್ತಿದ್ದಂತೆ ರಾಜಕೀಯ ಪ್ರವಾಸೋದ್ಯಮ ನಡೆಸಲು ಬರುತ್ತಿದ್ದಾರೆ. ಪ್ರಧಾನಿ ಇದಕ್ಕೆ ಮಾತ್ರ ಇರುವುದಾ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ ಸರ್ಕಾರಿ ಕಾರ್ಯಕ್ರಮ, ಆದರೂ ಅಲ್ಲಿ ಬಿಜೆಪಿಯ ಧ್ವಜಗಳು ಕಾಣುತ್ತಿದ್ದವು. ಪ್ರಧಾನಿ ಇರುವುದು ದೇಶಕ್ಕಾ ಅಥವಾ ಕೇವಲ ಬಿಜೆಪಿಗೆ ಮಾತ್ರವಾ ಎಂದು ಪ್ರಶ್ನಿಸಿದರು.

ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಮಸೂದೆಯ ರಚನೆಯಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಆಗ ಕಾಗೋಡು ತಿಮ್ಮಪ್ಪ ಸಚಿವರಾಗಿದ್ದರು. ಈಗ ಪ್ರಧಾನಿ ಕಲಬುರಗಿಯಲ್ಲಿ ಬಂದು ಬಂಜಾರ ಸಮುದಾಯಕ್ಕೆ ಪ್ರಮಾಣ ಪತ್ರ ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರನ್ನು ಕರಿಬೇಕಾಗಿತ್ತಲ್ಲವೇ ಎಂದು ಪ್ರಶ್ನಿಸಿದರು.

ಮೆಟ್ರೋ ಎಂಡಿ ಅಂಜುಮ್ ಪರ್ವೇಜ್‍ಗೆ ಪೊಲೀಸ್ ನೋಟಿಸ್

ಕರ್ನಾಟಕವನ್ನು ಗುಜರಾತ್ ಮಾಡೆಲ್ ಮಾಡಬೇಡಿ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಕರ್ನಾಟಕದ ಮಾಡೆಲ್ ತನ್ನಿ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಕರ್ನಾಟಕ ಎಂಬ ಸ್ವರ್ಗದಲ್ಲಿದ್ದೇವೆ ಎನಿಸುತ್ತದೆ ಎಂದರು.

MLC Hariprasad, Congress, BJP Govt.

Articles You Might Like

Share This Article