ಸಿಎಂರಿಂದ ನನಗೆ ನ್ಯಾಯ ಸಿಗುವ ಭರವಸೆ: ಆರ್ .ಶಂಕರ್

Social Share

ಬೆಂಗಳೂರು,ಫೆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಧಾನಪರಿಷತ್ ಸದಸ್ಯ ಆರ್ .ಶಂಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವು ಇದೆ. ಇದನ್ನುಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ಖಂಡಿತವಾಗಿಯೂ ನನಗೆ ನ್ಯಾಯ ಸಿಗುವ ಭರವಸೆ ನೀಡಿದರು.
ಮುಂದಿನ ಸಂಪುಟ ವಿಸ್ತರಣೆ ಸಮಯದಲ್ಲಿ ನನ್ನನ್ನೂ ಮಂತ್ರಿ ಮಾಡುತ್ತಾರೆ ಎಂಬ ವಿಶ್ವಾಸವಿದೆ. 100ಕ್ಕೆ 100ರಷ್ಟು ನನಗೆ ಭರವಸೆ ಇದೆ. ಸಿಎಂ ಒಳ್ಳೆಯದಾಗಲಿದೆ ಎಂದಿದ್ದಾರೆ. ಅವರು ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಹೀಗಾಗಿ ನನಗೆ ವರಿಷ್ಠರನ್ನು ಭೇಟಿ ಪ್ರಮಯ ಸೃಷ್ಟಿಯಾಗುವುದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಸರ್ಕಾರ ರಚನೆ ಆದಾಗ ನಂದೂ ಪ್ರಮುಖ ಪಾತ್ರವಿದೆ. ಹಿಂದಿನ ಸಿಎಂ ಹೇಗೆ ಹೇಳಿದ್ದಾರೋ ಹಾಗೆ ನಡೆದುಕೊಂಡಿದ್ದೇನೆ. ಈಗಲೂ ಸಿಎಂ ಬೊಮ್ಮಾಯಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ ಎಂದರು.

Articles You Might Like

Share This Article