ಬೆಂಗಳೂರು,ಸೆ.14- ನಿಮ್ಮನ್ನು ನಂಬಿದಕ್ಕೆ ನಾನು ಬೀದಿಗೆ ಬರುವಂತಾಯಿತು. ಇನ್ನೆಂದೂ ಜೀವನದಲ್ಲಿ ಬಿಜೆಪಿಯನ್ನು ನಂಬುವುದಿಲ್ಲ. ನಂಬಲು ಕೂಡ ಇದು ಅನರ್ಹ ಪಕ್ಷ ..! ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಅವರ ಆಕ್ರೋಶದ ಮಾತುಗಳಿವು. ಕಳೆದ ರಾತ್ರಿ ಖಾಸಗಿ ಹೋಟೆಲ್‍ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಅವರು ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ಸಚಿವ ಸ್ಥಾನ ಇಂದು ಸಿಗುತ್ತದೆ, ನಾಳೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಆರ್.ಶಂಕರ್ ಶಾಸಕಾಂಗ ಸಭೆಯಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ ಎಂದು ಗೊತ್ತಾಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು. ಅಲ್ಲಿ ನೆಮ್ಮದಿಯಾಗಿಯೂ ಇದ್ದೆ.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ
ಉನ್ನತ ಸ್ಥಾನಮಾನ ನೀಡಲಾಗುತ್ತದೆ ಎಂದು ನಂಬಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಯಿತು. ಇದರಿಂದ ಪಕ್ಷ ವಿರೋ ಚಟುವಟಿಕೆ ಹಣೆಪಟ್ಟಿ ಅಂಟಿಸಿ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಲಾಯಿತು.
ಕಾಡಿಬೇಡಿ ವಿಧಾನಪರಿಷತ್‍ಗೆ ಆಯ್ಕೆ ಮಾಡಿದರೂ ಸಚಿವ ಸ್ಥಾನ ಮಾತ್ರ ಈಗಲೂ ಗಗನಕುಸುಮವಾಗಿಯೇ ಉಳಿದಿದೆ. ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಸುಳ್ಳು ಹೇಳುತ್ತಲೇ ಬಂದಿದ್ದೀರಿ. ಇನ್ನೇನು ಚುನಾವಣಾ ವರ್ಷ ಸಮೀಪಿಸುತ್ತಿದೆ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ನೀವು ಕೊಡುವ ಕೊಡುಗೆ ಇದೇನಾ ಎಂದು ಶಂಕರ್ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ಈ ಹಂತದಲ್ಲಿ ಬೊಮ್ಮಾಯಿ ಸೇರಿದಂತೆ ಸಂಪುಟದ ಕೆಲವು ಸಚಿವರು ಶಂಕರ್ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಅವರು ಶಾಸಕಾಂಗ ಸಭೆಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿ ನೀವು ಬೇಡ, ನಿಮ್ಮ ಪಕ್ಷವು ಬೇಡ ನಿಮ್ಮನ್ನು ನಂಬಿ ಬಂದಿದ್ದಕ್ಕೆ ದೊಡ್ಡ ಉಡುಗೊರೆ ಕೊಟ್ಟಿದ್ದೀರಿ, ನಿಮ್ಮ ಸಚಿವ ಸ್ಥಾನ ನೀವೇ ಇಟ್ಟುಕೊಳ್ಳಿ ಎಂದು ಸಭೆಯಿಂದ ಹೊರಬಂದಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ
ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಕೆಲವರು ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಶಂಕರ್ ಮಾತ್ರ ಯಾರ ಮಾತÀನ್ನೂ ಕೇಳದೆ, ಕಳೆದ ಮೂರು ವರ್ಷದಿಂದ ಇದೇ ಮಾತು ಕೇಳಿ ಕೇಳಿ ಸಾಕಾಗಿದೆ. ನನ್ನ ಜೊತೆ ಬಂದವರಿಗೆ ಎರಡೆರಡು ಖಾತೆಗಳನ್ನು ಕೊಟ್ಟಿದ್ದೀರಿ. ಇನ್ನು ಎಷ್ಟು ದಿನ ಸುಳ್ಳು ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ನನ್ನನ್ನು ನಂಬಿಸಿ ದ್ರೋಹ ಮಾಡಿದ್ರಿ. ಮಂತ್ರಿ ಮಾಡ್ತೀನಿ ಅಂತಾ ನನ್ನನ್ನು ಕರೆದುಕೊಂಡು ಬಂದ್ರಿ, ಆ ನಂತರ ಸ್ವಲ್ಪ ದಿನ ಮಂತ್ರಿ ಮಾಡಿ, ಆ ನಂತರ ನನ್ನನ್ನು ಕೈ ಬಿಟ್ರಿ.
ನನ್ನ ಏನು ಅಂತಾ ನೀವು ಮಾತಾಡಿಸಿಲ್ಲ. ನನ್ನ ಕ್ಷೇತ್ರದಲ್ಲಿ ಜನರು ದುಡ್ಡು ತಗೊಂಡು ಹೋದ ಅಂತಾ ಪ್ರಚಾರ ಮಾಡ್ತಿದ್ದಾರೆ. ಇದರಿಂದ ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಆಗಬೇಕು? ನೀವು ಮಾಡಿದ್ದು ಸರಿನಾ? ನನಗೆ ನಂಬಿಸಿ ಮೋಸ ಮಾಡಿದರಲ್ಲ? ಎಂದು ಬಿಜೆಪಿ ನಾಯಕರ ವಿರುದ್ಧ ಆರ್.ಶಂಕರ್ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.