ದುಬಾರಿ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ನಾಲ್ವರ ಬಂಧನ

Social Share

ಬೆಂಗಳೂರು,ಡಿ. 7- ಮೊಬೈಲ್‍ಗಳನ್ನು ಎಗರಿಸುತ್ತಿದ್ದ ಶಿವಮೊಗ್ಗ ಮೂಲದ ಮೂವರು ಸೇರಿದಂತೆ ನಾಲ್ವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, 9 ಲಕ್ಷ ರೂ. ಬೆಲೆಬಾಳುವ 27 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರಾಘವೇಂದ್ರ(27), ಕಿರಣ್(28), ಶೌಕತ್ ಅಲಿ(28) ಮತ್ತು ಬೆಂಗಳೂರಿನ ಬನಶಂಕರಿಯ
ಬಲರಾಮ(38) ಬಂಧಿತ ಆರೋಪಿಗಳು. ಬಂಧಿತರಿಂದ ಐದು ಒನ್‍ಪ್ಲೆಸ್ ಮೊಬೈಲ್, 8 ವಿವೋ ಮೊಬೈಲ್‍ಗಳು, ನಾಲ್ಕು ರೆಡ್ಮಿ ಮೊಬೈಲ್, ಎರಡು ಎಂಐ ಮೊಬೈಲ್, ನಾಲ್ಕು ಸ್ಯಾಮ್‍ಸಾಂಗ್, ಒಂದು ಹಾನರ್ ಮೊಬೈಲ್, ಲಾವ, ಓಪೊ, ಎಕ್ಸಿಮಿ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

ಜಬಿವುಲ್ಲಾ ಎಂಬುವರು ತರಕಾರಿ ತೆಗೆದುಕೊಂಡು ಹೋಗಲು ಮಾರ್ಕೆಟ್‍ಗೆ ಬಂದಾಗ ಎಂಡಿ ಸರ್ಕಲ್ ಬಳಿ ಅವರ ವಿವೋ ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡ್ರಾಮಾ ನೋಡಿದ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಿಸಿದ ಕ್ರೂರಿ ಕಿಮ್

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪವಿಭಾಗದ ಸಹಾಯಕ ಧಿಲೀಸ್ ಆಯುಕ್ತ ಗಿರಿ ಅವರ ನಿರ್ದೇಶನದಲ್ಲಿ ಸಿಟಿ ಮಾರ್ಕೆಟ್ ಠಾಣೆ ಇನ್ಸ್‍ಪೆಕ್ಟರ್ ಶಿವಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

mobile, phones, Theft, four, Arrest,

Articles You Might Like

Share This Article