ಬೆಂಗಳೂರು,ಫೆ.22 – ಕಂಪನಿಯ ಗೋಡೌನ್‍ನಿಂದ 6.40 ಲಕ್ಷ ರೂ.ಮೌಲ್ಯದ ವಿವಿಧ ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡಿದ ಸೇಲ್ಸ್ ಆಫೀಸರ್ ನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ ಅಗ್ರಹಾರ, ಮಾಗಡಿ ರಸ್ತೆ 2 ನೇ ಕ್ರಾಸ್ ನಿವಾಸಿ ರಾಜೇಶ್(40) ಬಂಧಿತ ಸೇಲ್ಸ್ ಆಫೀಸರ್, ಕಂಪನಿಯ ಗೋಡೌನ್ ನಿಂದ ವಿವಿಧ ಮಾಡಲ್‍ನ 64 ಮೊಬೈಲ್ ಫೋನ್‍ಗಳ ಕಳ್ಳತನವಾಗಿದೆ ಎಂದು ಮಕ್‍ಬೂಲ್ ಅಹಮದ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ಪರಿಹಾರ
ಬ್ಯಾಟರಾಯನಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಆರೋಪಿ ಸೇಲ್ಸ್ ಆಫೀಸರ್ ರಾಜೇಶ್‍ನನ್ನು ಬಂಧಿಸಿ ಕಳ್ಳತನ ಮಾಡಿದ್ದ 6.40 ಲಕ್ಷದ ಮೌಲ್ಯದ 64 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
mobile, stolen, Sales officer, arrested,