ಮೊಬೈಲ್ ಟವರ್​​ಗಳಿ ಅಳವಡಿಸಿದ್ದ RRU ಬಾಕ್ಸ್ ಕದ್ದಿದ್ದ ಇಬ್ಬರ ಬಂಧನ

Social Share

ಬೆಂಗಳೂರು, ಜ.19- ಮೊಬೈಲ್ ಟವರ್‍ಗೆ ಅಳವಡಿಸಿದ ಆರ್‌ಆರ್‌ಯು ಬಾಕ್ಸ್‍ಗಳನ್ನು ಕಳವು ಮಾಡಿದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ 14 ಆರ್‍ಆರ್‍ಯು ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಹೋಬಳಿಯ ಚೆಳ್ಳೇಘಟ್ಟ ನಿವಾಸಿ ದೀಪಕ್ ರಾವ್ ಪವಾರ್(22) ಮತ್ತು ಜಾನ್‍ಪಿಂಟು(20) ಬಂಧಿತರು.
ಆರೋಪಿಗಳು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 11 ಲಕ್ಷ ಮೌಲ್ಯದ ಮೊಬೈಲ್ ಟವರ್‍ಗೆ ಅಳವಡಿಸಿದ್ದ 14 ಆರ್‍ಆರ್‍ಯು ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಉಪನಗರ 80 ಅಡಿ ರಸ್ತೆ ಕಾರ್ಡಿಯಾಲಜಿ ಆಸ್ಪತ್ರೆ ಕಟ್ಟಡದ ಪಕ್ಕದಲ್ಲಿರುವ ವೋಡಾಫೋನ್ ಕಚೇರಿ ಕಟ್ಟಡದ ನಾಲ್ಕನೇ ಮಹಡಿಯ ಟೆರೇಸ್ ಮೇಲೆ ಅಳವಡಿಸಿದ್ದ ಮೊಬೈಲ್ ಟವರ್‍ಗಳಲ್ಲಿನ ಆರ್‍ಆರ್‍ಯು ಬಾಕ್ಸ್‍ಗಳನ್ನು ಕಳವು ಮಾಡಿರುವ ಬಗ್ಗೆ ಯೋಗೇಶ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಬ್ಬರು ಪ್ಯಾಲೇಸ್ತಿನಿಯರನ್ನು ಗುಂಡಿಟ್ಟು ಕೊಂದ ಇಸ್ರೇಲ್

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತ-ಮುತ್ತಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿ ಇಬ್ಬರನ್ನು ಬಂಧಿಸಿ ಆರ್‍ಆರ್‍ಯು ಬಾಕ್ಸ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ ಬಿ. ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಸಂಜೀವನಗೌಡ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

mobile, towers, RRU, box, Theft, Two arrested,

Articles You Might Like

Share This Article