ಹಲ್ಲೆ ಮಾಡಿ ಪರಾರಿಯಾಗಿದ್ದ ದರೋಡೆಕೋರನ ಬಂಧನ

Social Share

ಬೆಂಗಳೂರು, ನ.22- ಬಸ್ ಮತ್ತು ಲಾರಿಗಳ ಗಾಜು ಹೊಡೆದು ಚಾಲಕ ಮತ್ತು ಕ್ಲೀನರ್‍ಗಳಿಗೆ ಲಾಂಗ್‍ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ದರೋಡೆಕೋರರ ಪೈಕಿ ಒಬ್ಬಾತನನ್ನು ಕಾಮಾಕ್ಷಿ ಠಾಣೆ ಪೊಲೀಸರು ಬಂಧಿಸಿ, 2.35 ಲಕ್ಷ ರೂ. ಬೆಲೆಬಾಳುವ ಮೂರು ಮೊಬೈಲ್ ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಚಂದ್ರಾಲೇಔಟ್ ನಿವಾಸಿ ವಿಕ್ರಂ ಅಲಿಯಾಸ್ ಸೈತಾನ್(21) ಬಂಧಿತ ಆರೋಪಿ. ಪ್ರಮುಖ ಆರೋಪಿ ವಿನಾಯಕ ಅಲಿಯಾಸ್ ಆರ್‍ಬೆಟ್ಟು ತಲೆಮರೆಸಿಕೊಂಡಿದ್ದಾನೆ. ನ.10ರಂದು ಬೆಳಗಿನ ಜಾವ 3.45ರ ಸುಮಾರಿನಲ್ಲಿ ಚೇತನ್ ಮತ್ತು ಅವರ ಜೊತೆಯಲ್ಲಿದ್ದ ಕ್ಲೀನರ್, ಡ್ರೈವರ್‍ಗಳು ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ರಿಂಗ್‍ರೋಡ್ ಸರ್ವಿಸ್ ರಸ್ತೆಯಲ್ಲಿ 3 ಬಸ್ಸುಗಳು ಮತ್ತು ಒಂದು ಕಂಟೇನರ್ ಲಾರಿಯನ್ನು ನಿಲ್ಲಿಸಿಕೊಂಡು ಮಲಗಿದ್ದರು.

ಆ ಸಂದರ್ಭದಲ್ಲಿ ಒಂದೇ ಬೈಕ್ ನಲ್ಲಿ ಬಂದ ನಾಲ್ವರು ದರೋಡೆಕೋರರು ಬಸ್ಸು
ಮತು ್ತ ಲಾರಿಗಳ ಗ್ಲಾಸನ್ನು ಹೊಡೆದು ಡ್ರೈವರ್ ಮತು ್ತ ಕ್ಲೀನರ್ ಗಳಿಗೆ ಲಾಂಗ್‍ನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 3 ಮೊಬೈಲ್ ಫೋನ್‍ಗಳು ಮತ್ತು 5 ಸಾವಿರ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಂಚನೆ ಮಾಡಿದವನನ್ನು ಕೊಂದು ಶವದ ಜೊತೆ ಪೊಲೀಸರಿಗೆ ಶರಣಾದ

ತನಿಖೆ ಕೈಗೊಂಡ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಸುಮಾರು 2.35 ಲಕ್ಷ ರೂ. ಬೆಲೆಬಾಳುವ ಮೂರು ಮೊಬೈಲ್ ಫೋನ್‍ಗಳು, 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ಆರ್.ಎಂ.ಸಿ. ಯಾರ್ಡ್, ಮಾಗಡಿ ರಸ್ತೆ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು, ರಾಜಗೋಪಾಲನಗರ ಪೊಲೀಸ್ ಠಾಣೆಯ ಎರಡು ಪ್ರಕರಣ, ಬಾಗಲಗುಂಟೆ, ಬ್ಯಾಟರಾಯನಪುರ, ನಂದಿನಿ ಲೇಔಟ್ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತವೆ.

ಮತ ಮಾಹಿತಿಗೆ ಕನ್ನ : ಆರೋಪ ಮುಚ್ಚಿಹಾಕುವ ಯತ್ನ ನಡೆದಿತ್ತೆ..?

ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮಣ್ ನಿಂಬರ್ಗಿ ಮಾರ್ಗದರ್ಶನದಲ್ಲಿ ವಿಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪಿ. ರವಿ ರವರ ನಿರ್ದೇಶನದಲ್ಲಿ ಇನ್ಸಪೆಕ್ಟರ್ ಲೋಹಿತ್. ಬಿ.ಎನ್. ರವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

mobiles, robber, man, arrested,

Articles You Might Like

Share This Article