ನವದೆಹಲಿ,ಡಿ.27- ಕೋವಿಡ್ ಸೋಂಕಿನಿಂದ ಎದುರಾಗಬಹುದಾದ ಸಂಭವನೀಯ ಸವಾಲುಗಳನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆ ಸಜ್ಜುಗೊಂಡಿರುವುದನ್ನು ಪರೀಕ್ಷಿಸಲು ಇಂದು ದೇಶಾದ್ಯಂತ ಮಾಕ್ಡ್ರಿಲ್ ನಡೆದಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಂದು ಸರ್ಕಾರಿ , ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂದರ್ಭಕ್ಕೆ ಪ್ರತಿಕ್ರಿಯಿಸಲು ಲಭ್ಯವಿರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಕುರಿತು ಪರಿಶೀಲನೆ ನಡೆದಿರುವ ಜೊತೆಗೆ ಅಣುಕು ಪ್ರದರ್ಶನ(ಮಾಕ್ಡ್ರಿಲ್) ಕೂಡ ನಡೆಸಲಾಯಿತು.
ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ ಸಾಮಥ್ರ್ಯ, ಮಾನವ ಸಂಪನ್ಮೂಲ, ತಜ್ಞ ವೈದ್ಯಕೀಯ ಸೇವೆ, ಪರೀಕ್ಷಾ ಸಾಮಥ್ರ್ಯ, ವೈದ್ಯಕೀಯ ಸಾಗಾಣಿಕಾ ಸೌಲಭ್ಯ, ಟೆಲಿಮೆಡಿಸನ್ ಸೇವೆ, ವೈದ್ಯಕೀಯ ಆಮ್ಲಜನಕ ಲಭ್ಯತೆ, ಆಮ್ಲಜನಕ ದಾಸ್ತಾನು ಸಾಮಥ್ರ್ಯ ಸೇರಿದಂತೆ ಹಲವಾರು ವಿಷಯಗಳನ್ನೊಳಗೊಂಡಂತೆ ಮಾಕ್ಡ್ರಿಲ್ ಪರಿಶೀಲನೆ ನಡೆದಿದೆ.
ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳ ಕುರಿತು ಇದೇ ರೀತಿ ಪರಿಶೀಲನೆ ನಡೆಸಲಾಗಿದೆ. ಒಟ್ಟಾರೆ ಲಭ್ಯವಿರುವ ಹಾಸಿಗೆಗಳ ಸಾಮಥ್ರ್ಯ, ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ಪ್ರಜೆ ಅರೆಸ್ಟ್, ಮಾದಕ ವಸ್ತು ಜಪ್ತಿ
ಸೋಂಕಿತ ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಮತ್ತು ಆತನಿಗೆ ಚಿಕಿತ್ಸೆ ಆರಂಭಿಸುವ ಸಮಯವನ್ನು ಅನುಕೂಲಕರವಾಗಿಸಲು ಮಾಕ್ಡ್ರಿಲ್ ಸಹಾಯ ಮಾಡಿದೆ.
ತಜ್ಞ ವೈದ್ಯಕೀಯ ಸೇವೆ ಸಜ್ಜುಗೊಳ್ಳುವುದರಿಂದ ಭವಿಷ್ಯದ ಯಾವುದೇ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ಕಡೆ ಆಯಾ ರಾಜ್ಯಗಳ ಆರೋಗ್ಯ ಸಚಿವರು ಮಾಕ್ಡ್ರಿಲ್ ವ್ಯವಸ್ಥೆಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.
ಏಮ್ಸ್ಗೆ ದಾಖಲಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ತೀವ್ರಗೊಂಡಿವೆ.ಬಿಎಫ್7 ರೂಪಾಂತರ ಉಪತಳಿ ಆಸ್ಪತ್ರೆ ದಾಖಲಾಗುವ ಮತ್ತು ಸಾವಿನ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಚೀನಾ ಹಿಂದೆಂದೂ ಕಾಣದಷ್ಟು ದುರಂತಗಳನ್ನು ಅನುಭವಿಸುವಂತಾಗಿದೆ. ಭಾರತದಲ್ಲಿ ಇಂಥ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಇಡೀ ವ್ಯವಸ್ಥೆ ಸಜ್ಜುಗೊಳ್ಳುತ್ತಿದೆ.
Mock drills, across, India, check, COVID-19, readiness,