ಬೆಂಗಳೂರು,ಡಿ.27- ಚೀನಾದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೆ ರಾಜ್ಯದಲ್ಲೂ ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ರಾಜ್ಯದೆಲ್ಲೆಡೆ ಮಾಕ್ ಡ್ರಿಲ್ ನಡೆಸಲಾಯಿತು.
ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದಲ್ಲಿರುವ ಜಿಲ್ಲೆ, ತಾಲೂಕು ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಕುರಿತ ಆರೋಗ್ಯ ಸೇವೆಗಳ ಮಾಕ್ ಡ್ರಿಲ್ ನಡೆಸಲಾಯಿತು. ನಗರದ ಸಿವಿರಾಮನ್ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಮತ್ತಿತರ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ ಅಣಕು ಪ್ರದರ್ಶನಗಳು ನಡೆದವು.
ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ತಾಲೀಮು ನಡೆಸಲಾಯಿತು. ರಾಜ್ಯದಲ್ಲಿ ಸ್ಥಾಪನೆಯಾಗಿರುವ ಆಕ್ಸಿಜನ್ ಪ್ಲಾಂಟ್ಗಳು, ಜನರೇಟರ್ಗಳು ಸೇರಿದಂತೆ ಕೋವಿಡ್ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಹಾಗೂ ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲಾಗಿದೆ.
ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರ ನೋಂದಣಿ ಗುರಿ
ಒಂದು ವೇಳೆ ಏಕಾಏಕಿ ಕೊರೊನಾ ದಾಳಿ ನಡೆಸಿದರೆ ಪರಿಸ್ಥಿತಿಯನ್ನು ಯಾವ ರೀತಿ ಹತೋಟಿಗೆ ತರಬೇಕು ಎಂಬ ಬಗ್ಗೆಯೂ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಕೊರೊನಾ ಚಿಕಿತ್ಸಾ ಕೇಂದ್ರವನ್ನು ಇದುವರೆಗೂ ತೆರವುಗೊಳಿಸದಿರುವ ಹಿನ್ನಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ಯಾವುದೇ ಮಾಕ್ ಡ್ರಿಲ್ ನಡೆಸಲಾಗಿಲ್ಲ.
ಕಳೆದ ಮೂರು ಅಲೆಗಳ ಸಂದರ್ಭದಲ್ಲೂ ನಮ್ಮ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಕೊರೊನಾ ಚಿಕಿತ್ಸಾ ಕೇಂದ್ರವನ್ನು ಮುಚ್ಚಿಲ್ಲ. ಹೀಗಾಗಿ ಸರ್ಕಾರದಿಂದ ನಮಗೆ ಮಾಕ್ ಡ್ರಿಲ್ ನಡೆಸುವಂತೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ನಮ್ಮ ಆಸ್ಪತ್ರೆಯಲ್ಲಿ ಮಾಕ್ ಡ್ರಿಲ್ ನಡೆಸುತ್ತಿಲ್ಲ ಎಂದು ಬೌರಿಂಗ್ ಆಸ್ಪತ್ರೆ ಸೂಪರ್ಡೆಂಟ್ ಕೆಂಪರಾಜು ತಿಳಿಸಿದ್ದಾರೆ.
ಒಂದನೇ ಅಲೆ ಸಮಯದಿಂದಲೂ ಕೂಡ ಕೊರೊನ ಚಿಕಿತ್ಸೆ ಮುಂದುವರೆಸಿದ್ದೇವೆ . ಇಲ್ಲಿನ ಕೋವಿಡ್ ವಾರ್ಡ್ ಬಂದ್ ಆಗಿಲ್ಲ. ಏರ್ಪೋರ್ಟ್ ನಿಂದ ಬರುವ ರೋಗಿಗಳನ್ನು ಇಲ್ಲಿ ತಪಾಸಣೆ ನಡೆಸಲಾಗುತ್ತಿದೆ. 8 ನೇ ಮಹಡಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಇಲ್ಲಿರುವ ಸಿಬ್ಬಂದಿಗಳಿಗೆ ಒಳ್ಳೆಯ ಟ್ರೈನಿಂಗ್ ಇದೆ ಎಂದು ಅವರು ಹೇಳಿದರು.
ಅರುಣಾಚಲ ಪ್ರದೇಶ ಬಂದ್, ಜನಜೀವನ ಅಸ್ತವ್ಯಸ್ತ
ನಮ್ಮ ಆಸ್ಪತ್ರೆಯಲ್ಲಿ 60 ಬೆಡ್ ಹಾಗೂ 19 ಐಸಿಯು ಬೆಡ್ಗಳ ವ್ಯವಸ್ಥೆ ಇದೆ. ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ ಮೂಲಕ ಸಿವಿಯರ್ ಗೆ ತಕ್ಕಂತೆ ಅವರಿಗೆ ಚಿಕಿತ್ಸೆ ನೀಡಲಾಗುತ್ತೆ. ನಮ್ಮ ಆಸ್ಪತ್ರೆಯಲ್ಲಿ ಸದ್ಯ ಯಾವುದೇ ಕೋವಿಡ್ ರೋಗಿಗಳು ಇಲ್ಲ . ಸರ್ಕಾರ ಬೆಡ್ ಸಂಖ್ಯೆ ಹೆಚ್ಚಳ ಮಾಡಬೇಕು ಅಂದ್ರೆ 150 ಬೆಡ್ ಗೆ ಹೆಚ್ಚಳ ಮಾಡುತ್ತೇವೆ ಎಂದು ಅವರು ಹೇಳಿದರು.
Mock drills, Karnataka, check, COVID-19, readiness,