ಬೆಂಗಳೂರು, ಜು.12- ಒಂದು ಕಡೆ ಸರ್ಕಾರಿ ಶಾಲೆ ಉಳಿಸಿ ಅಭಿಯಾನ, ಇನ್ನೊಂದೆಡೆ ನಿಯಮಗಳನ್ನು ಮಾಡಿ ಕೊಂಡು ಸರ್ಕಾರವೇ ಸರ್ಕಾರಿ ಶಾಲೆಗಳು ಮುಚ್ಚಿತ್ತಿವೆ ಇದು ಯಾವ ನ್ಯಾಯ. ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಪದವೀದರ ಮುಖ್ಯೋಪಾದ್ಯಾಯ ಹುದ್ದೆಯನ್ನು ತೆಗೆದು ಸರ್ಕಾರಿ ಶಾಲೆಯನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ಇಲಾಖಾ ಅಧಿಕಾರಿಗಳಿಂದ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ತ್ರಿಮೂರ್ತಿ ಹೇಳಿದ್ದಾರೆ.
ಶಿಕ್ಷಣ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಪಾಲಿಸಿ ಮ್ಯಾಟರ್ ಕತೆಗಳನ್ನು ಹೇಳಿ ಮಂತ್ರಿ ಮತ್ತು ಶಾಸಕರ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಸ್ತುತ 270 ದಾಖಲಾತಿ ಇರುವ ಹಾಗೂ ಎಲ್‍ಕೆಜಿ, ಯುಕೆಜಿ ಸೇರಿದರೆ 330 ಮಕ್ಕಳಿರುವ ಈ ಶಾಲೆ ಸ್ವಂತ ಬಸ್ ಇರುವ ರಾಜ್ಯದ ಏಕೈಕ ಶಾಲೆಯಾಗಿದೆ. ನೂರಾರು ಮಕ್ಕಳು ನಿತ್ಯ ಇದರಲ್ಲಿ ಬರುತ್ತಾರೆ.
ಚಾಲಕ- ನಿರ್ವಾಹಕ ಮತ್ತು ಡೀಸೆಲ್, ಭತ್ಯೆಗೆ ಸರ್ಕಾರದಿಂದಲೇ ಅನುದಾನ ಬರುವಂತೆ ಮುಖ್ಯೋಪಾಧ್ಯಾಯರಾದ ಡಾ.ಗಂಗಾಧರಪ್ಪ ನವರು ಹೋರಾಡಿ ಮಾಡಿಸಿದ್ದಾರೆ. ಎಲ್‍ಕೆಜಿ, ಯುಕೆಜಿಯಿಂದ 8ರ ತನಕ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮವಿದೆ. ಪಠ್ಯ ಮತ್ತು ಪಠ್ಯೇತರ ಸಾಂಸ್ಕೃತಿಕ ಚಟುವಟಕೆಗಳಿಗೆ ಹೆಸರಾಗಿದೆ. ಇನ್ನೂ ಹಲವು ಯೋಜನೆಗಳನ್ನು ಇಟ್ಟುಕೊಂಡಿದೆ.
ಜು.18ರಂದು ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ, 24 ಪಕ್ಷಗಳಿಗೆ ಆಹ್ವಾನ
ಟಿಬಿಜೆಎ ಗ್ರಾಮ ಪಂಚಾಯತ್ ಮತ್ತು ಶಾಸಕರು ಸಂಪೂರ್ಣ ಬೆಂಬಲ ಮತ್ತು ಪ್ರೋ ತ್ಸಾಹ ನೀಡುತ್ತಿದ್ದಾರೆ. ರಾಜ್ಯಾದ್ಯಂತ ಹಲವು ದಾನಿಗಳು ಈ ಶಾಲೆಗೆ ದೇಣಿಗೆ ನೀಡಿದ್ದಾರೆ.ಕಳೆದ ಬಾರಿ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಮತ್ತು ಡಾ.ಗಂಗಾಧರಪ್ಪರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಈ ರೀತಿಯ ಶಾಲೆಗಳು ರಾಜ್ಯದಲ್ಲಿ ಬೆರಳೆಣಿಕೆಯಲ್ಲಿವೆ.
ಕರೋನ ವೇಳೆ 2021ರಲ್ಲೀ ಕೇವಲ 16 ಮಕ್ಕಳು ಕಡಿಮೆ ಆಯ್ತು ಅಂತಾ (ಅವರ ಲೆಕ್ಕದಲ್ಲಿ 250ಕ್ಕಿಂತಾ ಕಡಿಮೆ ಇರಬಾರದು) ಪದವೀಧರ ಮುಖ್ಯೋ ಪಾದ್ಯಾಯ ಹುದ್ದೆ ತೆಗೆದು ಕಳೆದ ವರ್ಷದಿಂದ ಸಂಕಷ್ಟ ನೀಡುತ್ತಿರುವ ಇಲಾಖಾ ಅಕಾರಿಗಳು ಶಿಕ್ಷಣ ಇಲಾಖೆಯ ಕಮಿಷನರ್ ಮತ್ತು ಪ್ರಿನ್ಸಿಪಲ್ ಸೆಕ್ರೆಟರಿ ಕಚೇರಿಯ ಅಧಿಕಾರಿಗಳೇ ಇಲ್ಲಿ ಬಂದು ಈ ಶಾಲೆ ನಡೆಸೋಕೆ ನಿಮ್ಮಿಂದ ಆಗುತ್ತಾ?.. ಮಲೆನಾಡಲ್ಲಿ ಸರ್ಕಾರಿ ಶಾಲೆಯಲ್ಲಿ 250 ಮಕ್ಕಳು ಇರೋದು ಗ್ರೇಟ್ (ಎಲ್‍ಕೆಜಿ/ಯುಕೆಜಿ ಸೇರಿ ಈಗ 330 ಇದೆ)ನೀವೆಲ್ಲಾ ಸೇರಿ ಒಂದು ಸಣ್ಣ ಸರ್ಕಾರಿ ಶಾಲೆ ನಡೆಸಿ ತೋರಿಸಿ ನೋಡೋಣ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹುದ್ದೆಯನ್ನು ವಾಪಾಸು ಕೊಡಿಸಬೇಕು. 224 ಕ್ಷೇತ್ರಗಳಲ್ಲೂ ಶಾಸಕರ ಸರ್ಕಾರಿ ಮಾದರಿ ಶಾಲೆಗಳನ್ನು ಈ ಹಿಂದೆ ಯಾಕೆ ಮಾಡಿದ್ದಾರೆಂದು ಅರಿತುಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಗಂಭೀರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ತ್ರಿಮೂರ್ತಿ ಒತ್ತಾಯಿಸಿದ್ದಾರೆ.
#Modelschools, #closed, #meaninglessrules,