ಮೋದಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಇಲ್ಲ : ಭಾಗವತ್

Social Share

ಭೋಪಾಲ್,ನ.20- ಪ್ರಧಾನಿ ನರೇಂದ್ರ ಮೋದಿ ಅವರು ಸಂಘ ಸ್ವಯಂ ಸೇವಕ ಮತ್ತು ಪ್ರಚಾರಕ ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ
ಜಬಲ್‍ಪುರದಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಆರ್‍ಎಸ್‍ಎಸ್ ನೇರವಾಗಿ ಅಥವಾ ರಿಮೋಟ್‍ನಿಂದ ನಿಯಂತ್ರಿಸುವುದಿಲ್ಲ ಎಂದ ತಿಳಿಸಿದ್ದಾರೆ.

ಸಂಘದ ಹೆಸರು ಬಂದಾಗಲ್ಲೆ ನೀವು ಮೋದಿಜಿಯವರ ಹೆಸರನ್ನು ತೆಗೆದುಕೊಳ್ಳುವಿರಿ. ಹೌದು, ಮೋದಿಜಿ ಸಂಘ ಸ್ವಯಂಸೇವಕ ಮತ್ತು ಪ್ರಚಾರಕ. ವಿಎಚ್‍ಪಿ ಕೂಡ ನಮ್ಮ ಸ್ವಯಂಸೇವಕರಿಂದ ನಡೆಸಲ್ಪಡುತ್ತದೆ. ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ನಾವು ಸಮಾಲೋಚನೆ ಮತ್ತು ಸಲಹೆಗಳನ್ನು ಮಾತ್ರ ನೀಡಬಹುದು. ಆದರೆ, ಅವುಗಳನ್ನು ಎಂದಿಗೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.

ಮಂಗಳೂರಿನ ಆಟೋ ಸ್ಪೋಟ ಪ್ರಕರಣ ಎನ್‍ಐಎಗೆ ಹಸ್ತಾಂತರ

ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ತತ್ತ್ವಶಾಸ್ತ್ರ. ಸಂವಿಧಾನದ ಪೀಠಿಕೆಯೇ ಹಿಂದುತ್ವದ ಪ್ರಧಾನ ಚೇತನ. ಭಾರತವು ಭಾಷೆ, ವ್ಯಾಪಾರ ,ರಾಜಕೀಯ ಶಕ್ತಿ ಮತ್ತು ಚಿಂತನೆಯ ಆಧಾರದಲ್ಲಿ ಒಂದು ರಾಷ್ಟ್ರವಾಗಲಿಲ್ಲ. ಇದು ವೈವಿಧ್ಯತೆಯಲ್ಲಿ ಏಕತೆ ಮತ್ತು ವಸುಧೈವ್ ಕುಟುಂಬಕಂ (ಜಗತ್ತು ಒಂದು ಕುಟುಂಬ) ಆಧಾರದ ಮೇಲೆ ಒಂದು ರಾಷ್ಟ್ರವಾಗಿದೆ ಎಂದು ಹೇಳಿದರು.

ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ : ಎಲಾನ್ ಮಸ್ಕ್

ಸಮಾಜವನ್ನು ರೂಪಿಸುವುದು ಭಾಷೆ ಅಥವಾ ಪೂಜಾ ಪದ್ಧತಿಯಲ್ಲ. ಸಾಮಾನ್ಯ ಗುರಿ ಹೊಂದಿರುವ ಜನರು ಸಮಾಜವನ್ನು ನಿರ್ಮಿಸುತ್ತಾರೆ. ವೈವಿಧ್ಯತೆಗಳು ಸ್ವಾಗತಾರ್ಹ ಮತ್ತು ಸ್ವೀಕಾರಾರ್ಹ. ಆದರೆ, ವೈವಿಧ್ಯಗಳು ಯಾವುದೇ ರೀತಿಯಲ್ಲಿ ಯಾವುದೇ ತಾರತಮ್ಯದ ಆಧಾರವಾಗಬಾರದು ಎಂದು ಅವರು ಹೇಳಿದರು.

Modi, swayamsevak, but, works, independently, RSS,

Articles You Might Like

Share This Article