ಕೆಲವರಿಗೆ ವಾಸಿಸಲು ಜಾಗವಿಲ್ಲ, ಕೆಲವರಿಗೆ ಹಣ ಬಚ್ಚಿಡಲು ಜಾಗ ಸಿಗುತ್ತಿಲ್ಲ : ಮೋದಿ

Social Share

ನವದೆಹಲಿ,ಆ.15- ಭಾರತದಲ್ಲಿ ಕೆಲವರಿಗೆ ವಾಸ ಮಾಡಲು ಜಾಗವಿಲ್ಲ. ಇನ್ನು ಕೆಲವರಿಗೆ ತಾವು ದೋಚಿದ ಹಣವನ್ನು ಬಚ್ಚಿಡಲು ಜಾಗ ಸಿಗುತ್ತಿಲ್ಲ. ಈ ಎರಡೂ ವೈವಿಧ್ಯತೆಗಳನ್ನು ನಾವು ನೋಡಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಭಾರತ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದೆ. ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳನ್ನು ತಲುಪುತ್ತಿದ್ದೇವೆ. ಎರಡು ಲಕ್ಷ ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದ್ದೇವೆ ಎಂದು ಹೇಳಿದರು.

ಭ್ರಷ್ಟಾಚಾರವನ್ನು ನಿವಾರಿಸಲು ನಿರ್ಣಾಯಕ ಹೆಜ್ಜೆ ಇಡಬೇಕಿದೆ. ದೇಶವನ್ನೇ ಹಾಳು ಮಾಡುತ್ತಿರುವ ಈ ಪಿಡುಗಿನ ವಿರುದ್ಧ ಪ್ರತಿಯೊಬ್ಬ ಸಾಮಾನ್ಯ ನಾಗರಿಕನುಹೋರಾಟ ಮಾಡಬೇಕು. ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳ ವಿರುದ್ಧ ಜನ ನಿಂದನಾತ್ಮಕ ಮತ್ತು ದಂಡನಾತ್ಮಕ ಅಭಿಪ್ರಾಯಗಳನ್ನು ಅನುಸರಿಸಬೇಕು. ಭ್ರಷ್ಟರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕು ಎಂದರು.

ವಂಶವಾಹಿನಿ ಆಡಳಿತ ರಾಜಕಾರಣಕ್ಕಷ್ಟೆ ಅಲ್ಲ ಎಲ್ಲ ಕ್ಷೇತ್ರಗಳಿಗೂ ಮಾರಕ. ಸ್ವಜನ ಪಕ್ಷಪಾತದಿಂದ ದೇಶದ ಸಾಮಥ್ರ್ಯ ಮತ್ತು ಪ್ರತಿಭೆಗೆ ಧಕ್ಕೆಯಾಗುತ್ತಿದೆ. ಈ ಬಾರಿ ಒಲಿಂಪಿಕ್ಸ್, ಕಾಮನ್‍ವೆಲ್ತ್ ಸೇರಿದಂತೆ ಪ್ರಮುಖ ಕ್ರೀಡೆಗಳಿಗೆ ಸ್ವಜನಪಕ್ಷಪಾತ ಬಿಟ್ಟು ಅಥ್ಲಿಟಿಕ್‍ಗಳನ್ನು ಆಯ್ಕೆ ಮಾಡಿದ್ದರಿಂದ ಅಂತಾರಾಷ್ಟ್ರೀಯ ಸರ್ಧೆಯ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಹಾರಿದೆ. ರಾಷ್ಟ್ರಗೀತೆ ಮೊಳಗಿದೆ.

ಕೆಲವರಿಗೆ ತಾವು ಸಂಪಾದಿಸಿದ ಹಣವನ್ನು ಮುಚ್ಚಿಡುವಲ್ಲೇ ಅನಾರೋಗ್ಯ ಕಾಡುತ್ತಿದೆ. ರಾಜಕೀಯವಷ್ಟೇ ಅಲ್ಲ ಎಲ್ಲ ಕ್ಷೇತ್ರವು ಸ್ವಜನಪಕ್ಷಪಾತದಿಂದ ಶುದ್ಧಿಯಾಗಬೇಕು. ಆಗ ಭಾರತಕ್ಕೆ ಉಜ್ವಲ ಭವಿಷ್ಯವಿದೆ.

ಜನರಲ್ಲಿ ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ಆಪತ್ಯದ ವಿರುದ್ಧ ಜಾಗೃತಿ ಹೆಚ್ಚಾಗಬೇಕಿದೆ. ಪಾರದರ್ಶಕತೆ ಮತ್ತು ಯೋಗ್ಯತೆ ಆಧಾರಿತ ಆಯ್ಕೆಗಳು ನಡೆಬೇಕು. ಸಶಕ್ತ ಭಾರತ ನಿರ್ಮಾಣಕ್ಕೆ ಭಾರತ ಒಂದು ತಂಡವಾಗಿ ಕೆಲಸ ಮಾಡಬೇಕಿದೆ ಎಂದರು.

Articles You Might Like

Share This Article