ಶಿವಮೊಗ್ಗ,ಫೆ.27- ಐದು ದಶಕಗಳ ಕಾಲ ಬಡವರು ಮತ್ತು ರೈತರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೀವನ ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠ ದಿಂದ ಹೊಗಳಿದರು.
ಇತ್ತೀಚೆಗೆ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಮಾಡಿದ ವಿದಾಯದ ಭಾಷಣ ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ಪ್ರೇರಣೆಯಾಗಿದೆ. ಬಡವರು, ರೈತರಿಗಾಗಿ 50 ವರ್ಷ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಈಗಲೂ ಅವರೊಬ್ಬ ಜನಪ್ರಿಯ ನಾಯಕ ಎಂದು ಬಣ್ಣಿಸಿದರು.
ಜನನಾಯಕನಿಗೆ ಪ್ರಧಾನ ಸೇವಕರಿಂದ ಸನ್ಮಾನ. #modiinmalnad #BJPYeBharavase pic.twitter.com/jdTktZiKdT
— BJP Karnataka (@BJP4Karnataka) February 27, 2023
ಯಡಿಯೂರಪ್ಪನವರಿಗೆ 80ನೇ ಹುಟ್ಟಹಬ್ಬದ ಶುಭಾಶಯ ಕೋರಿದ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರಿಂದ ಮೊಬೈಲ್‍ನ ಫ್ಲ್ಯಾಶ್ ಲೈಟ್ ಆನ್ ಮಾಡಿಸಿ ಬಿಎಸ್‍ವೈಗೆ ಗೌರವ ಸೂಚಿಸಿದರು.
ಇನ್ನು ತಮ್ಮ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆ ಜಯ ಹೇ ಭಾರತ ಜನನಿಯ ತನುಜಾತೆ ಎನ್ನುವ ಮೂಲಕ ಕನ್ನಡ ಭಾಷೆಯನ್ನು ಹೊಗಳಿದರು.
ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಶಿವಮೊಗ್ಗ ಜಿಲ್ಲೆ ಇತಿಹಾಸವನ್ನು ಪ್ರಶಂಸೆ ಮಾಡಿದರು. ಸಕ್ಕರೆ ಬೈಲು, ಆನೆ ಶಿಬಿರ, ಸಿಗಂದೂರು ಚೌಡೇಶ್ವರಿ ದೇವಿ, ಮತ್ತೂರಿನ ಸಂಸ್ಕøತ ಗ್ರಾಮ, ಕೋಟೆ ಆಂಜನೇಯ ಆಧ್ಯಾತ್ಮಿಕ ಗ್ರಾಮಗಳಿಂದ ಕೂಡಿದೆ ಎಂದು ಪ್ರಶಂಶಿಸಿದರು.
ಆಗುಂಬೆಯ ಸೂರ್ಯಾಸ್ತಮ, ತಾವರೆಕೊಪ್ಪ ಸಿನಿಮಾಧಾಮ, ಸಹ್ಯಾದ್ರಿ ಪರ್ವತ, ಜೋಗಜಲಪಾತದಂತಹ ಪ್ರೇಕ್ಷಣಿಯ ಸ್ಥಳಗಳು, ಇಲ್ಲಿನ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಮಾದರಿಯಾಗಿದೆ ಎಂದು ಮೋದಿ ಹಾಡಿ ಹೊಗಳಿದರು.
ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯ ರಥ ಸಾಗುತ್ತಿದೆ.
ಸಾವರ್ಕರ್, ಟಿಪ್ಪು ಸಿದ್ದಾಂತದ ಮೇಲೆ ಚುನಾವಣೆ ನಡೆಯುವುದಿಲ್ಲ : ಬಿಎಸ್‌ವೈ
ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. 2014ರಕ್ಕಿಂತ ಮೊದಲು ಕೇವಲ ದೊಡ್ಡ ನಗರಗಳಿಗೆ ಮಾತ್ರ ವಿಮಾನ ನಿಲ್ದಾಣ ಸೀಮಿತವಾಗಿತ್ತು. ಬಿಜೆಪಿ ಅಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲಿಯೂ ಏರ್‍ಫೋರ್ಟ್ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಬಡವನು ಕೂಡ ವಿಮಾನಯಾನ ಮಾಡುವಂತಾಗಬೇಕು. ಹೀಗಾಗಿ ಕಡಿಮೆ ಮೆಚ್ಚದಲ್ಲಿ ಟಿಕೆಟ್ ಮಾಡಲಾಗುತ್ತಿದೆ ಎಂದು ಹೇಳಿದರು.
Modi, inaugurates, Shivamogga, airport, praises, Yediyurappa, assembly, speech,