ಕೇಜ್ರಿವಾಲ್ ರ‍್ಯಾಲಿಯಲ್ಲಿ ಮೋದಿ ಘೋಷಣೆ

Social Share

ನವದೆಹಲಿ,ನ.21- ಗುಜರಾತ್‍ನಲ್ಲಿ ತನ್ನ ಬಲಾಬಲ ಪ್ರದರ್ಶನಕ್ಕೆ ಮುಂದಾಗಿರುವ ಆಮ್ ಆದ್ಮಿ ಪಕ್ಷ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‍ನಲ್ಲಿ ರೋಡ್ ಶೋ ನಡೆಸಿ ಆಪ್ ಸರ್ಕಾರಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಮೋದಿ ಮೋದಿ ಎಂದು ಜೈಕಾರ ಹಾಕುವ ಮೂಲಕ ಕೇಜ್ರಿವಾಲ್ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.

ಮುಜುಗರದಿಂದ ಧೃತಿಗೆಡದ ಕೇಜ್ರಿವಾಲ್ ಅವರು ಯಾರಿಗೆ ಬೇಕಾದರೂ ಬೆಂಬಲದ ಘೋಷಣೆಗಳನ್ನು ಕೂಗಬಹುದು, ಆದರೆ ಅವರೇ ಅವರ ಮಕ್ಕಳಿಗೆ ಶಾಲೆಗಳನ್ನು ನಿರ್ಮಿಸುತ್ತಾರೆ ಮತ್ತು ಉಚಿತ ವಿದ್ಯುತ್ ಒದಗಿಸುತ್ತಾರೆ ಎಂದು ಹೇಳಿದರು. ಮೋದಿ ಪರ ಘೋಷಣೆಗಳನ್ನು ಕೂಗುವವರ ಹೃದಯವನ್ನು ಮುಂದೊಂದು ದಿನ ಎಎಪಿ ಗೆಲ್ಲಲಿದೆ ಎಂದೂ ಅವರು ಭವಿಷ್ಯ ನುಡಿದರು.

ಕೆಲ ಸ್ನೇಹಿತರು ‘ಮೋದಿ, ಮೋದಿ’ ಎಂದು ಕೂಗುತ್ತಿದ್ದಾರೆ, ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಆದರೆ ಕೇಜ್ರಿವಾಲ್ ಅವರು ನಿಮ್ಮ ಶಾಲೆಗಳನ್ನು ಮಾಡುತ್ತಾರೆ. ಮಕ್ಕಳೇ, ನೀವು ಎಷ್ಟು ಘೋಷಣೆಗಳನ್ನು ಕೂಗಿದರೂ, ಕೇಜ್ರಿವಾಲ್ ಅವರು ನಿಮಗೆ ಉಚಿತ ವಿದ್ಯುತ್ ನೀಡುತ್ತಾರೆ.

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ನಮಗೆ ಯಾರೊಂದಿಗೂ ದ್ವೇಷವಿಲ್ಲ, ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು, ಮುಂದೊಂದು ದಿನ ನಿಮ್ಮ ಮನ ಗೆದ್ದು ನಮ್ಮ ಪಕ್ಷಕ್ಕೆ ಕರೆತರುತ್ತೇವೆ ಎಂದರು.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದು, ತಮ್ಮ ಪಕ್ಷದ ಉದ್ಯೋಗ ಖಾತರಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ 3,000 ನಿರುದ್ಯೋಗ ಭತ್ಯೆ ನೀಡುವುದಾಗಿ ಪುನರುಚ್ಚರಿಸಿದರು.

ಶಾಲೆಗಳ ಬಗ್ಗೆ ಮಾತನಾಡುವ ಯಾವುದೇ ಪಕ್ಷವಿಲ್ಲ, ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿ ಉದ್ಯೋಗ ಮತ್ತು ಉಚಿತ ವಿದ್ಯುತ್ ನೀಡುವುದಾಗಿ ಯಾವುದೇ ಪಕ್ಷ ಭರವಸೆ ನೀಡಿದೆಯೇ? ಈ ವಿಷಯಗಳ ಬಗ್ಗೆ ಮಾತನಾಡುವುದು ನಮ್ಮ ಪಕ್ಷ ಮಾತ್ರ ಎಂದು ಅವರು ಹೇಳಿದರು.

ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

ಜನರು ಗೂಂಡಾಗಿರಿಯನ್ನು ನಂಬಿದರೆ ಮತ್ತು ನಿಂದನೆಗಳನ್ನು ಮಾಡಲು ಬಯಸಿದರೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬಹುದು ಎಂದು ಕೇಜ್ರಿವಾಲ್ ಹೇಳಿದರು.

ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಆಮೀಷವೊಡ್ಡಿದ 6 ಮಂದಿ ವಿರುದ್ದ FIR

ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಎಎಪಿ ಮೊದಲ ಬಾರಿಗೆ ಗುಜರಾತ್‍ನ ಎಲ್ಲಾ 182 ಸ್ಥಾನಗಳಲ್ಲಿ ಸ್ರ್ಪಧಿಸುತ್ತಿದೆ. ಪಕ್ಷವು ಆಡಳಿತಾರೂಢ ಬಿಜೆಪಿಗೆ ತನ್ನನ್ನು ಪ್ರಮುಖ ಸ್ರ್ಪಧಿ ಎಂದು ಗುರುತಿಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ.

‘Modi Modi, ‘ chants, raised, during ,Kejriwal, roadshow,

Articles You Might Like

Share This Article