ಫೆ.6ಕ್ಕೆ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ

Social Share

ಬೆಂಗಳೂರು,ಜ.21- ಪ್ರಧಾನಿ ನರೇಂದ್ರ ಮೋದಿ ಅವರು ಫೆ.6ರಂದು ಪುನಃ ಕರ್ನಾಟಕಕ್ಕೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವ ಮೂಲಕ ವಿಧಾನಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲಿದ್ದಾರೆ.

ಫೆ.6ರಂದು ರಾಜ್ಯಕ್ಕೆ ಆಗಮಿಸಲಿರುವ ಮೋದಿ ಅವರು ಧಾರವಾಡದಲ್ಲಿ ಸಿದ್ದಗೊಂಡಿರುವ ಐಐಟಿ ಕೇಂದ್ರ ಹಾಗೂ ತುಮಕೂರಿನ ತಿಪಟೂರಿನಲ್ಲಿ ಎಚ್‍ಎಎಲ್ ಘಟಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಎನ್‍ಡಿಎ ಸರ್ಕಾರ 2014-15ರ ಬಜೆಟ್‍ನಲ್ಲಿ ಘೋಷಣೆ ಮಾಡಿದಂತೆ ಐಐಟಿ ಕೇಂದ್ರವನ್ನು ಮಂಜೂರು ಮಾಡಿತ್ತು. ಈವರೆಗೂ ಇಲ್ಲಿನ ಹೈಕೋರ್ಟ್ ಪೀಠದ ಬಳಿ ಇರುವ ಧಾರವಾಡದ ನೀರು ಮತ್ತು ಭೂಮಿ ನಿರ್ವಹಣಾ ಸಂಸ್ಥೆಯ ಕ್ಯಾಂಪಸ್ ಬಳಿ ಕಾರ್ಯ ನಿರ್ವಹಿಸುತ್ತಿತ್ತು.

ಇದೀಗ ಚಿಕ್ಕಮಾಳಿಗವಾಡ ಗ್ರಾಮದಲ್ಲಿ ಶಾಶ್ವತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸುಮಾರು 500 ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ತಲೆ ಎತ್ತಿದೆ. ಮೊದಲು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಮ್ಯಾಕನಿಕಲ್ ಇಂಜಿನಿಯರಿಂಗ್, ಕೆಮಿಕಲ್, ಬಯೋಕೆಮಿಕಲ್, ಸಿವಿಲ್, ಇನ್ರಾಸ್ಟ್ರಕ್ಚರ್ ಇಂಜಿನಿಯರಿಂಗ್, ಇಂಟರ್ ಡಿಸಿಪ್ಲೀನಿಯರ್ ಸೈನ್ಸ್ ಸೇರಿದಂತೆ ಮತ್ತಿತರ ಕೋರ್ಸ್‍ಗಳನ್ನು ನೀಡಲಾಗುತ್ತದೆ. ಬಾಂಬೆ ಐಐಟಿಯು ಮಾರ್ಗದರ್ಶನ ನೀಡುತ್ತಿದ್ದು, ಕೇಂದ್ರ ಶಿಕ್ಷಣ ಇಲಾಖೆ ಇದರ ನಿರ್ವಹಣೆ ಮಾಡುತ್ತಿದೆ.

ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ತಲೆದಂಡ

ಎಚ್‍ಎಎಲ್ ಘಟಕ ಲೋಕಾರ್ಪಣೆ: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲ್‍ನಲ್ಲಿ ನಿರ್ಮಾಣಗೊಂಡಿರುವ ಎಚ್‍ಎಎಲ್ ಹೆಲಿಕಾಫ್ಟರ್ ಘಟಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕವನ್ನು ನರೇಂದ್ರ ಮೋದಿ ಅವರಿಂದ 2016ರಲ್ಲಿ ಶಂಕುಸ್ಥಾಪನೆಗೊಂಡು ಈಗ ಪ್ರಧಾನಿಯಿಂದಲೇ ಪ್ರಾರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಸದರಿ ಎಚ್.ಎ.ಎಲï. ಘಟಕ ವಿಸ್ತರಿಸಲು ಎಚ್‍ಎಎಲ್‍ನ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಕಾರೇಹಳ್ಳಿಯ ಹತ್ತಿರ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ.

ಈ ಸ್ಥಳವು ಸೂಕ್ತವಾಗಿರುವುದಿಲ್ಲವಾದ್ದರಿಂದ ಬಿದರೇಹಳ್ಳ ಕಾವಲ್ ಹತ್ತಿರದ ಅರಣ್ಯ ಇಲಾಖೆಗೆ ಸೇರಿದ ಜಾಗವು ಸೂಕ್ತ ವಾಗಿರುವುದರಿಂದ ಅಲ್ಲಿ ಏರ್ ಪೋಸ್ಪ್ರಿಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆಯಿಂದ 1300 ಎಕರೆ ಜಾಗವನ್ನು ಪಡೆದು ಅರಣ್ಯ ಇಲಾಖೆಗೆ ಪ್ರತಿಯಾಗಿ ಬೇರೆ ಪ್ರದೇಶವನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಇದರಿಂದ ಇಲ್ಲಿ ಸುಮಾರು ಹೆಚ್ಚಿನ ಜನರಿಗೆ ಉದ್ಯೋಗ ದೊರೆಯಲು ಅವಕಾಶವಾಗುತ್ತದೆ.

ಈ ಘಟಕ ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸಲಿದ್ದು, 3 ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿಏಯಾಏಗಏಲಿದೆ ಎಂದು ಅಂದಾಜಿಸಲಾಗಿದೆ. ಯುಪಿಎ ಸರ್ಕಾರದ 2ನೇ ಅವಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ನಲ್ಲಿ ಎಚ್‍ಎಎಲ್ ಲಘು ಹೆಲಿಕಾಪ್ಟರ್ ಏರ್ ಘಟಕವನ್ನು ನಿರ್ಮಾಣ ಮಾಡಲು ಒಪ್ಪಿಗೆ ದೊರಕಿತ್ತು. ಘಟಕ ಸ್ಥಾಪನೆಗೆ ಬೀದರ್ ಮತ್ತು ತುಮಕೂರಿನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ತುಮಕೂರು ಆಯ್ಕೆಯಾಗಿತ್ತು.

ನ್ಯೂಜಿಲ್ಯಾಂಡ್‍ಗೆ ಕ್ರಿಸ್ ಹಿಪ್ಕಿನ್ಸ್ ಪ್ರಧಾನಿಯಾಗುವ ಸಾಧ್ಯತೆ

ಸುಮಾರು 610 ಎಕರೆ ಜಾಗದಲ್ಲಿ ಘಟಕ ನಿರ್ಮಾಣಗೊಳ್ಳಲಿದೆ. ಘಟಕ ನಿರ್ಮಾಣಕ್ಕೆ ಸುಮಾರು 4000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಯಾವ ಹೆಲಿಕಾಪ್ಟರ್ ಉತ್ಪಾದನೆ?: ಗುಬ್ಬಿಯ ಉತ್ಪಾದನೆ ಘಟಕದಲ್ಲಿ 3000 ಕೆ.ಜಿ.ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲು ಎಚ್‍ಎಎಲ್ ಉದ್ದೇಶಿಸಿದೆ. 5 ರಿಂದ 6 ಜನರು ಪ್ರಯಾಣಿಸಬಹುದಾದದ ಈ ಹೆಲಿಕಾಪ್ಟರ್ ಅನ್ನು ಭೂ ಸೇನೆ ಮತ್ತು ವಾಯುಸೇನೆ ಬಳಸಲಿವೆ.

ಭವಿಷ್ಯದಲ್ಲಿ ಈ ಘಟಕದಲ್ಲಿ 10 ರಿಂದ 12 ಸಾವಿರ ಟನ್ ತೂಕದ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿಯನ್ನು ಎಚ್‍ಎಎಲ್ ಹೊಂದಿದೆ.

Modi, attend, rallies, Karnataka, February,

Articles You Might Like

Share This Article