ನವದೆಹಲಿ, ಸೆ.18- ಭಾರತದ ವೇಗಿ ಮಹಮ್ಮದ್ ಶಮಿ ಅವರು ಕೊರೊನಾ ಸೋಂಕು ತಗುಲಿದೆ. ಮೊಹಾಲಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ತಂಡದ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಪರ ಬೌಲಿಂಗ್ ಮಾಡಬೇಕಿದ್ದ ಶಮಿ ಅವರು ಪಂದ್ಯ ಆರಂಭಕ್ಕೂ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕು ತಗುಲಿದೆ.
ಟಿ20 ತಂಡದಿಂದ ಕೆಲ ದಿನಗಳ ಕಾಲ ದೂರ ಉಳಿದಿದ್ದ ಶಮಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು.
ಗುಜರಾತ್ ಟೈಟಾನ್ಸ್ ತಂಡದಲ್ಲಿ ಶಮಿ ಅವರ ಅಮೋಘ ಬೌಲಿಂಗ್ ಸಾಧನೆಯಿಂದ ಆ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು.
ಅಂತಹ ಆಟಗಾರನನ್ನು ಏಷ್ಯಾ ಕಪ್‍ನಿಂದ ಹೊರಗಿಡಲಾಗಿತ್ತು. ಇದರ ಜೊತೆಗೆ ಮುಂದಿನ ಟಿ20 ವಿಶ್ವಕಪ್‍ನಲ್ಲಿ ಬದಲಿ ಆಟಗಾರನ್ನಾಗಿ ನಿಯೋಜಿಸಿ ಇದೇ 20 ರಿಂದ ಆರಂಭವಾಗಲಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರಿಗೆ ಸ್ಥಾನ ನೀಡಲಾಗಿತ್ತು. ಇದೀಗ ಶಮಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಅವರು ಅಲಭ್ಯರಾಗುವ ಸಾಧ್ಯತೆಗಳಿವೆ.