ಬೆಂಗಳೂರು , ಡಿ.14- ಒಎಲ್‍ಎಕ್ಸ್‍ನಲ್ಲಿ ಹಾಕಿರುವ ಜಾಹೀರಾತನ್ನು ನೋಡಿಕೊಂಡು ಸೈಟ್ ತೆಗೆದುಕೊಳ್ಳುವುದಾಗಿ ನಂಬಿಸಿ ಅವರ ವಿಶ್ವಾಸಗೊಳಿಸಿ ಅವರ ಮೊಬೈಲ್‍ನಿಂದಲೇ 1.40 ಲಕ್ಷ ರೂ. ಹಣವನ್ನು ವರ್ಗಾಹಿಸಿಕೊಂಡು ವಂಚಿಸಿದ್ದ ಆಂಧ್ರ ಮೂಲದ ವಂಚಕನನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ದೇವರೆಂಟಿ ವಿನೋದ್ ಕುಮಾರ್ ರೆಡ್ಡಿ(38) ಬಂಧಿತ ವಂಚಕ. ಸಾಮಾಜಿಕ ಜಾಲತಾಣವಾದ ಒಎಲ್‍ಎಕ್ಸ್‍ನಲ್ಲಿ ಪಿರ್ಯಾದುದಾರರೊಬ್ಬರು ತಮ್ಮ ಸೈಟ್ ಮಾರಾಟ ಮಾಡುವ ಉದ್ದೇಶದಿಂದ ಜಾಹೀರಾತುವೊಂದನ್ನು ಹಾಕಿದ್ದರು.
ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ..?
ಇದನ್ನು ನೋಡಿದ ಆರೋಪಿಯು ಸೆಪ್ಟೆಂಬರ್ 30ರಂದು ಪಿರ್ಯಾದುದಾರರ ಮೊಬೈಲ್‍ಗೆ ಕರೆ ಮಾಡಿ ಅವರನ್ನು ಪರಸ್ಪರ ಭೇಟಿಯಾಗಿ ಬೆಂಗಳೂರಿನ ಪೀಣ್ಯದ ಬಳಿ ಇರುವ ಸೈಟನ್ನು ನೋಡಿದ್ದಾನೆ. ನಾನು ನಿಮ್ಮ ಸೈಟನ್ನು ಕೊಂಡುಕೊಳ್ಳುತ್ತೇನೆ. ನಿಮ್ಮ ಫೋನ್ ಪೇ ಖಾತೆಗೆ ಹಣ ಜಮ ಮಾಡುತ್ತೇನೆಂದು ಹೇಳಿ ಅವರನ್ನು ನಂಬಿಸಿ ಅವರ ಮೊಬೈಲ್‍ನ ಲಾಕ್ ಹಾಗೂ ಪಾಸ್‍ವರ್ಡ್‍ನ್ನು ತಿಳಿದುಕೊಂಡಿದ್ದಾನೆ.
ನಂತರ ಅವರ ಮೊಬೈಲ್‍ನ್ನು ಮಾತನಾಡಿಕೊಡುವುದಾಗಿ ನೆಪ ಹೇಳಿ ಬ್ಯಾಂಕ್ ಖಾತೆಗೆ ಲಿಂಕ್
ಆಗಿದ್ದ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದನು. ಕೇವಲ 30 ನಿಮಿಷಗಳಲ್ಲಿ ಪಿರ್ಯಾದುದಾರರ ಬ್ಯಾಂಕ್ ಖಾತೆಗಳಿಂದ ಹಂತ-ಹಂತವಾಗಿ ಒಟ್ಟು 1.40 ಲಕ್ಷ ರೂ.ಗಳನ್ನು ವರ್ಗಾಹಿಸಿಕೊಂಡು ವಂಚಿಸಿದ್ದಾನೆ.
ತಾವು ಮೋಸ ಹೋಗಿದ್ದನ್ನು ಅರಿತ ಪಿರ್ಯಾದುದಾರರು ತಕ್ಷಣ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಇರುವುದನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳಿ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯು ಇದೇ ರೀತಿ ಗೋವಾ, ಆಂಧ್ರಪ್ರದೇಶದ ನರಸಾಪೇಟ, ಗುಡಿವಾಡ, ಕಾಕಿನಾಡ, ವಿಜಯವಾಡ, ನೆಲ್ಲೂರು, ಎಸ್.ಆರ್. ನಗರ ಪೊಲೀಸ್ ಠಾಣೆ ಹೈದ್ರಾಬಾದ್, ಕರ್ನಾಟಕದ ಹುಬ್ಬಳ್ಳಿ, ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲೂ ಅಪರಾಧ ವೆಸಗಿರುವುದು ವಿಚಾರಣೆ ವೇಳೆ ಕಂಡುಬಂದಿರುತ್ತದೆ.
ಈ ಆರೋಪಿಯು ಒಎಲ್‍ಎಕ್ಸ್ ನಲ್ಲಿ ಸಾರ್ವಜನಿಕರು ಸೈಟ್‍ಗಳು ಹಾಗೂ ಮನೆಗಳ ಮಾರಾಟ ಮಾಡುವ ಸಲುವಾಗಿ ಹಾಕಿರುವ ಜಾಹೀರಾತನ್ನು ನೋಡಿಕೊಂಡು ಸಾರ್ವಜನಿಕರಿಗೆ ದೂರವಾಣಿ ಮೂಲಕ ಕರೆ ಮಾಡಿ ತಾನು ಸೈಟ್ ಖರೀದಿ ಮಾಡುತ್ತೇನೆಂದು ಹೇಳಿ ಅವರನ್ನು ಸೈಟ್ ಹತ್ತಿರ ಅಥವಾ ಮನೆ ಮಾರಾಟ ಮಾಡುವ ಸ್ಥಳದಲ್ಲಿ ಕರೆಸಿಕೊಳ್ಳುತ್ತಿದ್ದನು.
ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ
ನಿಮ್ಮ ಸೈಟ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಸಾರ್ವಜನಿಕರ ಬ್ಯಾಂಕ್ ಖಾತೆ ವಿವರಗಳನ್ನು ಹಾಗೂ ಫೋನ್ ಪೇ ಖಾತೆಗೆ ಹಣ ಜಮಾ ಮಾಡುತ್ತೇನೆ ಎಂದು ಹೇಳಿ ನಂಬಿಸಿ ಅವರ ಮೊಬೈಲ್ ಫೋನ್ ಲಾಕ್ ಹಾಗೂ ಪಾಸ್‍ವರ್ಡ್‍ನ್ನು ತೆಗೆದುಕೊಂಡು ಮಾತನಾಡುವ ನೆಪ ಹೇಳಿ ಮೊಬೈಲ್ ಪಡೆದು ಸ್ಥಳದಿಂದ ಪರಾರಿಯಾಗಿ ತಕ್ಷಣವೇ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದನು.
ಈ ಹಿಂದೆ ಆರೋಪಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ನಾರಾಯಣಗುಡಾ ಪಿಎಸ್. ವಿಜಯಾನಗರಂ ಟೌನ್ ಒನ್, ಸೈಫಾಬಾದ್, ರಾಜೇಂದ್ರನಗರ, ಮಾದಾಪುರ, ವೆಸ್ಟ್‍ಪಿಎಸ್ ತಿರುಪತಿ, ದ್ವಾರಕಾ ಪಿಎಸ್, ರಾಮಗೋಪಾಲ್ ಪೇಟೆ, ಬಂಜರಾ ಹಿಲ್ಸ್, ಪುತ್ತೂರು ಪಿ.ಎಸ್. ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ.
#money, #cheating, #man #arrest,