ಬೆಂಗಳೂರು, ಫೆ.21- ಯುವತಿಯರನ್ನು ಯುವಕರ ಜೊತೆ ಕಳುಹಿಸಿ ಅವರು ಹೊಟೇಲ್‍ಗೆ ಹೋದಾಗ ತಾವು ಪೊಲೀಸರೆಂದು ದಾಳಿ ಮಾಡಿ ಯುವಕರಿಂದ ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಬೇಗೂರು ಠಾಣೆ ಪೊಲೀಸರು, ಯುವತಿ ಸೇರಿದಂತೆ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಫೆ.17ರಂದು ಸ್ನೇಹಿತರಾದ ಮಂಜುನಾಥ್ ಮತ್ತು ರಜನಿಕಾಂತ್ ಬನ್ನೇರುಘಟ್ಟ ರಸ್ತೆಯ ಹೊಟೇಲ್ ಬಳಿ ಯುವತಿಯೊಂದಿಗೆ ಮಾತನಾಡುತ್ತಾ, ಮುಂಜಾನೆ 1.30ರ ಸುಮಾರಿನಲ್ಲಿ ನಿಂತಿದ್ದರು.
ಏ.1ರಿಂದಲೇ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
ಆ ಸಂದರ್ಭದಲ್ಲಿ ಮೂರು ಬೈಕ್‍ಗಳಲ್ಲಿ ಬಂದ ಆರು ಮಂದಿ, ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದೀರೆಂದು ಮಂಜುನಾಥ್ ಮತ್ತು ರಜನೀಕಾಂತ್ ಜೊತೆ ಜಗಳವಾಡಿದ್ದಾರೆ. ನಂತರ ಆರೋಪಿಗಳು ಕಾರಿನಲ್ಲಿ ಈ ಮೂವರನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಮಂಜುನಾಥ್ ಬುದ್ದಿವಂತಿಕೆಯಿಂದ ದಾರಿ ಮಧ್ಯೆ ಕಾರಿನಿಂದ ಹೊರಗೆ ಹಾರಿ ತಪ್ಪಿಸಿಕೊಂಡಿದ್ದಾನೆ.
ನಂತರ ಕೋಳಿ ಫಾರಂ ಗೇಟ್ ಬಳಿ ಮಂಜುನಾಥ್ ಬಂದು ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬೇಗೂರು ಠಾಣೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಯುವತಿ ಸೇರಿದಂತೆ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ
ಆರೋಪಿಗಳು ಇದೇ ರೀತಿ ಹಲವಾರು ಯುವಕರಿಗೆ ಬೆದರಿಸಿ ಹಣ ಕಿತ್ತುಕೊಂಡಿರುವ ಸಾಧ್ಯತೆಯಿದ್ದು , ಆ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Money, extortion, police, 8 arrested,