ಸಾಲ ತೀರಿಸಲು ಹಣ ಕಳ್ಳತನ ಕಳ್ಳತನ ಮಾಡಿದ್ದ ಆಟೋ ಚಾಲಕನ ಬಂಧನ

Social Share

ಬೆಂಗಳೂರು, ಜ.30- ಸಾಲ ತೀರಿಸಲು ಪ್ರಯಾಣಿಕರ ಹಣವಿದ್ದ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ 1.5 ಲಕ್ಷ ಹಣ ಹಾಗೂ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ರಂಗಸ್ವಾಮಿ (50) ಬಂಧಿತ ಆಟೋ ರಿಕ್ಷಾ ಚಾಲಕ.

ಜ.24ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಪಿರ್ಯಾದುದಾರರು ಗಾಂಧಿ ಬಜಾರ್‍ನಿಂದ ಬಾಡಿಗೆ ಆಟೋ ಮಾಡಿಕೊಂಡು ಮಲ್ಲೇಶ್ವರಂನ 7ನೆ ಕ್ರಾಸ್‍ನ ಮಾರ್ಗೋಸಾ ರಸ್ತೆಯಲ್ಲಿರುವ ವಿಜಯ ಹೋಮಿಯೋಪತಿ ಆಸ್ಪತ್ರೆಗೆ ಕಿವಿಯ ಚಿಕಿತ್ಸೆಗಾಗಿ ಬಂದಿದ್ದರು.

ಆ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕನಿಗೆ 20 ನಿಮಿಷ ಕಾಯುವಂತೆ ತಿಳಿಸಿ, ಹಣವಿದ್ದ ಬ್ಯಾಗನ್ನು ಆಟೋ ಸೀಟಿನ ಹಿಂಬದಿಯಲ್ಲಿ ಇಟ್ಟು ಬ್ಯಾಗ್ ನೋಡಿಕೊಳ್ಳುವಂತೆ ಹೇಳಿದಾಗ, ಆಟೋ ಚಾಲಕ ನೋಡಿಕೊಳ್ಳುತ್ತೇನೆ, ನೀವು ಕ್ಲಿನಿಕ್‍ಗೆ ಹೋಗಿ ಎಂದು ತಿಳಿಸಿದ್ದಾನೆ.

ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆಗೆ ತೆರೆ

ಪಿರ್ಯಾದುದಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 4.50ರ ಸುಮಾರಿಗೆ ವಾಪಸ್ ಬಂದು ನೋಡಿದಾಗ, ಆಟೋ ಚಾಲಕ ಪಾರ್ಕಿಂಗ್ ಜಾಗದಲ್ಲಿ ಇರದೆ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದು ತಕ್ಷಣ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಟೋ ಚಾಲಕನನ್ನು ಪತ್ತೆಮಾಡಿ ಬ್ಯಾಗ್‍ನಲ್ಲಿದ್ದ ಹಣ ಮತ್ತು ದಾಖಲೆಗಳನ್ನು ಕೊಡಿಸುವಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮೋಸ ಮತ್ತು ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

ತನಿಖಾಧಿಕಾರಿಯವರು ಕೃತ್ಯ ನಡೆದ ಅಕ್ಕಪಕ್ಕ ಸ್ಥಳದಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿ ಆ ಆಧಾರದ ಮೇರೆಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿ 1.5 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆಯ ಗುಸುಗುಸು

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ರಂಗಸ್ವಾಮಿ ಸಾಲ ಮಾಡಿಕೊಂಡಿದ್ದು, ತನ್ನ ದುಡಿಮೆಯಿಂದ ಸಾಲ ತೀರಿಸಲು ಸಾಧ್ಯವಾಗದೆ ಇರುವುದರಿಂದ ಪಿರ್ಯಾದಿ ಆಟೋದಲ್ಲಿ ಇಟ್ಟಿದ್ದ ಬ್ಯಾಗ್‍ನಲ್ಲಿ ಹಣ ಇರುವುದು ಗಮನಿಸಿ, ಈ ಹಣದಿಂದ ಸಾಲ ತೀರಿಸಿಕೊಳ್ಳಬಹುದೆಂದು ನಿರ್ಧರಿಸಿ ಹಣ ತೆಗೆದುಕೊಂಡು ಹೋಗಿದ್ದಾಗಿ ವಿಚಾರಣೆ ವೇಳೆ ಆರೋಪಿಯು ತಿಳಿಸಿದ್ದಾನೆ.

ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Money, theft, Auto driver, arrested,

Articles You Might Like

Share This Article