ರಾಜ್ಯದಲ್ಲಿ ಮಂಕಿಪಾಕ್ಸ್ ಕುರಿತು ತೀವ್ರ ಕಟ್ಟೆಚ್ಚರ ವಹಿಸಲು ಮಾರ್ಗಸೂಚಿ ಪ್ರಕಟ

Social Share

ಬೆಂಗಳೂರು,ಜು.23- ಕೇರಳದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ರಾಜ್ಯ ಆರೋಗ್ಯ ಇಲಾಖೆಯು ತೀವ್ರ ಕಟ್ಟೆಚ್ಚರ ಹಾಗೂ ಮಾರ್ಗಸೂಚಿ ಹೊರಡಿಸಲು ಮುಂದಾಗಿದೆ.ಮಂಕಿಪಾಕ್ಸ್ ಪತ್ತೆಯಾಗಿ ಅದು ಉಲ್ಭಣಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯಲು 5ರಿಂದ 13 ದಿನಗಳನ್ನು ತೆಗೆದುಕೊಳ್ಳುತ್ತದೆ. ಕೇವಲ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇದು ಹರಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಆದರೆ ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ನಿಕಟ ಮುಖಾಮುಖಿ ಸಂಪರ್ಕದಿಂದ, ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಹತ್ತಿರ ಮೂರು ಗಂಟೆಗಳಿಗೂ ಕಾಲ 6 ಅಡಿ ಅಂತರದಲ್ಲಿದ್ದು, ವ್ಯಕ್ತಿ ಸುರಕ್ಷಿತಾ ಸಾಧನಗಳನ್ನು ಧರಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಚರ್ಮ ಅಥವಾ ಜನನಾಂಗದ ಗಾಯಗಳು, ಉಸಿರಾಟದಿಂದ ಅಥವಾ ಸೋಂಕಿತ ವ್ಯಕ್ತಿಗಳು ಬಳಸುವ ಕಲುಷಿತ ವಸ್ತುಗಳ ಸಂಪರ್ಕದ ಮೂಲಕ ಮಂಕಿಪಾಕ್ಸ್ ಇನ್ನೊಬ್ಬರಿಗೆ ಹರಡುತ್ತದೆ ತಜ್ಞರು ಹೇಳಿದ್ದಾರೆ. ಮಂಕಿಪಾಕ್ಸ್ ಲಕ್ಷಣಗಳು ಸಿಡುಬಿನಂತೆಯೇ ಇದ್ದರೂ, ಹೆಚ್ಚಿನ ಪ್ರಕರಣಗಳು ಸೌಮ್ಯ ಮತ್ತು ಸ್ವಯಂ-ಸೀಮಿತವಾಗಿದ್ದು, ವ್ಯಕ್ತಿಯಲ್ಲಿ 2ರಿಂದ 4 ವಾರಗಳವರೆಗೆ ಇರುತ್ತದೆ.

ರೋಗಿ ತ್ವರಿತವಾಗಿ ಚೇತರಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು, ಮೈ ಮೇಲೆ ಬೀಳುವ ದದ್ದುಗಳನ್ನು ಒಣಗಲು ಬಿಡುವುದು ಅಥವಾ ಅಗತ್ಯವಿದ್ದರೆ ತೇವಾಂಶವುಳ್ಳ ಡ್ರೆಸ್ಸಿಂಗ್‍ನೊಂದಿಗೆ ಪ್ರದೇಶವನ್ನು ರಕ್ಷಿಸುವುದು. ಬಾಯಿ ಅಥವಾ ಕಣ್ಣುಗಳ ಸುತ್ತ ಮುಟ್ಟಬಾರದು ಎಂದು ವೈದ್ಯರು ಸಲಹೆ ಮಾಡಿದ್ದಾರೆ.

ಮಂಕಿಪಾಕ್ಸ್ ವರದಿಯಾದ ಪ್ರದೇಶದಲ್ಲಿ ಇರುವವರು, ಮಂಕಿಪಾಕ್ಸ್ ವೈರಸ್ ಬಂದ ವ್ಯಕ್ತಿಯ ಜೊತೆ ಸಂಪರ್ಕದ ಹೊಂದಿರುವವರು ಅಥವಾ ಹಿಂದಿನ 21 ದಿನಗಳಲ್ಲಿ ಶಂಕಿತ ವ್ಯಕ್ತಿಗೆ ಒಡ್ಡಿಕೊಂಡವರು ಎಚ್ಚರವಾಗಿರಲು ಮತ್ತು ತಮ್ಮನ್ನು ತಾವು ಐಸೊಲೇಷನ್ ಗೊಳಪಡಬೇಕೆಂದು ತಜ್ಞರು ಹೇಳುತ್ತಾರೆ.

ಲಕ್ಷಣಗಳು: ಜ್ವರ, ಶೀತ ಮತ್ತು ಬೆವರು, ದುಗ್ಧರಸ ಗ್ರಂಥಿಗಳ ಊತ, ತಲೆನೋವು, ಸ್ನಾಯು ನೋವು, ಬೆನ್ನುನೋವು, ನಿಶ್ಯಕ್ತಿ, ನೋಯುತ್ತಿರುವ ಗಂಟಲು ಮತ್ತು ಕೆಮ್ಮು, ಚರ್ಮದ ದದ್ದುಗಳು, ಗುಳ್ಳೆಗಳು ಮುಂತಾದವುಗಳು ಮಂಕಿಪಾಕ್ಸ್ ಲಕ್ಷಣಗಳಾಗಿವೆ.

Articles You Might Like

Share This Article