ವಿಮಾನಯಾನ ಕ್ಷೇತ್ರದ ಸಾಧನೆ ಅಮೋಘ ; ಮೋದಿ

Social Share

ನವದೆಹಲಿ,ಫೆ.22- ದೇಶದಲ್ಲಿ ಹೆಚ್ಚುತ್ತಿರುವ ವಿಮಾನ ನಿಲ್ದಾಣಗಳು ಹಾಗೂ ಉತ್ತಮ ಸಂಪರ್ಕದಿಂದಾಗಿ ವಿಮಾನ ಯಾನ ಕ್ಷೇತ್ರವೂ ಜನರ ಹೃದಯಕ್ಕೆ ಹತ್ತಿರವಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಫೆ.19ಕ್ಕೆ ದೇಶೀಯ ವಿಮಾನ ಸಂಚಾರ ಸುಮಾರು 4.45 ಲಕ್ಷ ಪ್ರಯಾಣಿಕರ ಗರಿಷ್ಠ ಮಟ್ಟ ತಲುಪಿರುವ ಕುರಿತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ಮೋದಿ ಅವರು ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟ್‍ನಲ್ಲಿ ಅವರು ಹೆಚ್ಚು ವಿಮಾನ ನಿಲ್ದಾಣಗಳು ಮತ್ತು ಉತ್ತಮ ಸಂಪರ್ಕದಿಂದಾಗಿ ವಿಮಾನಯಾನ ಕ್ಷೇತ್ರವು ಜನರನ್ನು ಹತ್ತಿರ ತರುತ್ತಿದೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್

ಕೋವಿಡ್‍ಗೆ ಮೊದಲು, ಸರಾಸರಿ ದೈನಂದಿನ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 3,98,579 ಆಗಿತ್ತು. ಇದೀಗ 4,44,845 ಪ್ರಯಾಣಿಕರು ವಿಮಾನ ಬಳಕೆ ಮಾಡುತ್ತಿದ್ದಾರೆ ಇದೊಂದು ಭಾರತೀಯ ವಿಮಾನಯಾನ ಸಂಸ್ಥೆಯ ಮೈಲಿಗಲ್ಲು ಎಂದು ಸಿಂಧಿಯಾ ಮಾಹಿತಿ ಹಂಚಿಕೊಂಡಿದ್ದರು.

ಪ್ರಸ್ತುತ, ದೇಶದಲ್ಲಿ 147 ಕಾರ್ಯಾಚರಣೆಯ ವಿಮಾನ ನಿಲ್ದಾಣಗಳಿವೆ. ಫೆಬ್ರವರಿ 27 ರಂದು ಕರ್ನಾಟಕದ ಶಿವಮೊಗ್ಗದಲ್ಲಿ ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸುತ್ತಿದ್ದಾರೆ.

‘More airports, better, connectivity, bringing, people, closer, PM Modi,

Articles You Might Like

Share This Article