ನವದೆಹಲಿ/ಮುಂಬೈ, ಜ.11- ದೇಶದೆಲ್ಲೆಡೆ ಕೊರೊನಾ ಸೋಂಕು ರಣಕೇಕೆ ಹಾಕುತ್ತಿರುವಾಗಲೇ ರಾಷ್ಟ್ರದ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿರುವ ಜೈಲುಗಳಲ್ಲೂ ಕೂಡ ಕೊರೊನಾ ಸೋಟಗೊಂಡಿದೆ.
ದೆಹಲಿಯಲ್ಲಿ ಇದುವರೆಗೂ 66 ಕೈದಿಗಳಿಗೆ ಸೋಂಕು ತಗುಲಿರುವ ಬಗ್ಗೆ ವರದಿಗಳು ಬಂದಿವೆ, ತಿಹಾರ್ ಜೈಲಿನಲ್ಲಿರುವ 42 ಮಂದಿ ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ,ಮಾಂಡೋಲಿಯ ಕಾರಾಗೃಹದಲ್ಲಿ 24 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಜೈಲುಗಳಲ್ಲಿ ಕಾರ್ಯನಿರ್ವ ಹಿಸುವ 48 ಮಂದಿ ಸಿಬ್ಬಂದಿಗಳಿಗೂ ಕೊರೊನಾ ತಟ್ಟಿದ್ದು, 27 ಮಂದಿ ತಿಹಾರ್ ಜೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, 12 ಮಂದಿ ರೋಹಿನಿ ಹಾಗೂ 9 ಮಂದಿ ಮಾಂಡೋಲಿ ಜೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರೆಲ್ಲರೂ ಐಸೋಲೇಷನ್‍ಗೆ ಒಳಗಾಗಿದ್ದಾರೆ ಎಂದು ವರದಿ ಆಗಿದೆ.
ದೆಹಲಿಯಲ್ಲಿ 66 ಕೈದಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದರೆ ವಾಣಿಜ್ಯ ನಗರಿ ಮುಂಬೈನ ಜೈಲುಗಳಲ್ಲೂ ಕೂಡ ಕೈದಿಗಳಲ್ಲಿ ಸೋಂಕು ಪತ್ತೆಯಾಗಿದೆ.ಆಥೂರ್ ರಸ್ತೆಯಲ್ಲಿರುವ ಜೈಲಿನಲ್ಲಿ 30 ಕೈದಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಅವರನ್ನು ಐಸೋಲೇಷನ್‍ಗೆ ಒಳಪಡಿಸಲಾಗಿದೆ ಎಂದು ವರದಿ ಆಗಿದೆ.
