ಫ್ರಾಂಕೋ ಡ ರೋಚಾ (ಬ್ರೆಜಿಲï), ಫೆ.1-ಬ್ರೆಜಿಲ್ ರಾಜ್ಯದ ಸಾವೊ ಪಾಲೊ ರಾಜ್ಯದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ತಲುಪಿದೆ, ಅಗ್ನಿಶಾಮಕ ಸಿಬ್ಬಂದಿ ಮಣ್ಣಿನಿಂದ ದೇಹ ಹೊರತೆಯುವುದನ್ನು ಮುಂದುವರೆಸಿದ್ದಾರೆ.
ಬ್ರೆಜಿಲ್‍ನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಾವೊ ಪಾಲೊದಲ್ಲಿ ಕಳೆದ ಶನಿವಾರದಿಂದ ಭಾರಿ ಮಳೆ ಸುರಿದೆ ಮೇಘಸೋಟದಿಂದ ಸಾವಿರಾರು ಮನೆಗಳು ಜಲಾವೃತವಾಗಿ ಕೆಲವು ಮುಳುಗಿದೆ ಎಂದು ನಾಗರಿಕ ರಕ್ಷಣಾ ಪ್ರಾಕಾರದ ಹೇಳಿಕೆ. ಹಲವಡೆ ಭೂಕುಸಿತ ಉಂಟಾಗಿದ್ದು ಚಿಕ್ಕಮಕ್ಕಳು ಸೇರಿ ಕುಟುಂಬಗಳೇ ಬಲಿಯಾದ್ದಾರೆ ಹಲವರು ಕಣ್ಮರೆಯಾಗಿದ್ದಾರೆ.
ಮನೆಗೆ ನೀರು ನುಗ್ಗಿದಾಗ ನಾನು ಓಡಲು ಪ್ರಾರಂಭಿಸಿ ಅವಶೇಷಗಳು ನನ್ನ ಮೇಲೆ ಬಿದ್ದವು ಗಾಯಗೊಂಡೆ ಜೀವ ಹೊಯಿತೆಂತು ತಿಳಿದೆ ಆದರೆ ರಂಧ್ರವನ್ನು ಕಂಡುಕೊಂಡೆ ಬದುಕಿದೆ ಮತ್ತು ದೇವರಿಗೆ ಧನ್ಯವಾದಗಳು ಎಂದು ಬೋನಿಮ್ ಹೇಳಿದರು. ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಆದರೆ ನನ್ನ ತಂದೆ ಇನ್ನೂ ಮಣಿನಡೆ ಸಿಲಿಕಿದ್ದಾರೆ ಎಂದು ಕಣೀರು ಹಾಕಿದರು.
ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಲು ಹೆಲಿಕಾಪ್ಟರ್ ಬಳಸಲಾಗಿದೆ ಇನ್ನು ಸಾವಿನ ಸಂಖ್ಯ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಆಗ್ನೇಯ ಬ್ರೆಜಿಲ್ ವರ್ಷದ ಆರಂಭದಿಂದಲೂ ಭಾರೀ ಮಳೆ ಕಾಡುತ್ತಿದೆ.
