ರಷ್ಯಾದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

Social Share

ಪಣಜಿ,ಜ.10-ರಷ್ಯಾದ ಮಾಸ್ಕೋದಿಂದ ಭಾರತ ಗೋವಾಕ್ಕೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ದೂರವಾಣಿ ಕರೆ ಹಿನ್ನಲೆಯಲ್ಲಿ ಕೆಲ ಕಾಲ ಅಧಿಕಾರಿಗಳು ಆತಂಕಗೊಂಡ ಘಟನೆ ಕಳೆದ ರಾತ್ರಿ ನಡೆದಿದೆ.

ಗೋವಾ ಎಟಿಸಿಗೆ ದೂರವಾಣಿ ಕರೆ ಮಾಡಿ ದುಷ್ಕರ್ಮಿ ಬಾಂಬ್ ಬೆದರಿಕೆ ಹಾಕಿದ್ದ ನಂತರ ವಿಮಾನದ ಮಾರ್ಗ ಬದಲಾವಣೆ ಮಾಡಿ ಜಾಮ್‍ನಗರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ.
ಲ್ಯಾಂಡಿಂಗ್ ನಂತರ, ಎಲ್ಲಾ 236 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಿದ ಪೊಲೀಸರು, ಬಿಡಿಡಿಎಸ್ ಮತ್ತು ಸ್ಥಳೀಯ ಅಕಾರಿಗಳು ಇಡೀ ವಿಮಾನವನ್ನು ಶೋಧಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ಅಶೋಕ್ ಕುಮಾರ್ ಯಾದವ್ ಹೇಳಿದರು.

ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ಅಜುರ್ ಏರ್ ವಿಮಾನದಲ್ಲಿ ಬಾಂಬ್ ಭೀತಿಯ ಬಗ್ಗೆ ಭಾರತೀಯ ಅಧಿಕಾರಿಗಳು ರಾಯಭಾರ ಕಚೇರಿಯನ್ನು ಎಚ್ಚರಿಸಿದ್ದಾರೆ ಎಂದು ದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

39 ವರ್ಷ ಬಾಹ್ಯಾಕಾಶ ಸಂಶೋಧನೆ ನಡೆಸಿ ಭೂಮಿಗೆ ಹಿಂತಿರುಗಿದ ಉಪಗ್ರಹ

ವಿಮಾನವು ಜಾಮ್‍ನಗರ ಭಾರತೀಯ ವಾಯುಪಡೆ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಗೋವಾ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದಾಬೋಲಿಮ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ವಿಮಾನ ನಿಲ್ದಾಣದಲ್ಲಿ ಎಲ್ಲಾ ತುರ್ತು ಸೇವೆಗಳನ್ನು ಸ್ಟ್ಯಾಂಡ್‍ಬೈನಲ್ಲಿ ಇರಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

Moscow, Goa, charter, flight, emergency, landing, Gujarat,

Articles You Might Like

Share This Article