ಅಯೋಧ್ಯೆ,ಮಾ.4- ಉತ್ತರ ಪ್ರದೇಶದ ಅಯೋಧ್ಯೆಅಭಿವೃದ್ಧಿ ಪ್ರಾಧಿಕಾರ ಧನ್ನಿಪುರ ಬಳಿ ಮಸೀದಿ ನಿರ್ಮಾಣಕ್ಕೆ ಅಂತಿಮ ಅನುಮತಿ ನೀಡಿದೆ. ಬಾಬರಿ ಮಸೀದಿ-ರಾಮ ಜನ್ಮಭೂಮಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್‍ನ ಆದೇಶದಂತೆ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನೀಡಿದ ಐದು ಎಕರೆ ಭೂಮಿಯಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆಮನೆ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ.
ಭೂ ಪರಿವರ್ತನೆಗೆ ಎರಡು ವರ್ಷದಿಂದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ (ಎಡಿಎ) ಅನುಮೋದನೆ ನೀಡದ ಕಾರಣಕ್ಕೆ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎಂದು ಹೇಳಲಾಗಿತ್ತು.
ಶುಕ್ರವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಮಸೀದಿಯ ಯೋಜನೆಯನ್ನು ಅನುಮೋದಿಸಲಾಗಿದೆ. ಮಂಜೂರಾದ ನಕ್ಷೆಗಳನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಗೆ ಹಸ್ತಾಂತರಿಸಲಾಗುವುದು, ಕೆಲವು ಇಲಾಖೆಗಳ ಔಪಚಾರಿಕತೆಗಳು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿವೆ, ಎಂದು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾ.26ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ
ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಮಾತನಾಡಿ, ಎಲ್ಲಾ ಅನುಮತಿಗಳು ದೊರೆತ ಬಳಿಕ ಶೀಘ್ರದಲ್ಲೇ ಸಭೆ ನಡೆಸಿ ಮಸೀದಿ ನಿರ್ಮಾಣದ ಯೋಜನೆಯನ್ನು ಅಂತಿಮಗೊಳಿಸಲಾಗುವುದು. 2021ರ ಜನವರಿ 26ರಂದು ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಬಾಬರಿ ಮಸೀದಿಗಿಂತಲೂ ಧನ್ನಿಪುರ ಮಸೀದಿ ದೊಡ್ಡದಾಗಿರುತ್ತದೆ.
ಅಯೋಧ್ಯೆಯಲ್ಲಿ ಇದ್ದ ರಚನೆಯ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗುವುದಿಲ್ಲ ಎಂದು ಹುಸೇನ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ 2019ರ ನವೆಂಬರ್ 9ರಂದು ನೀಡಿರುವ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಆದೇಶಿಸಿತು. ಅದೇ ವೇಳೆ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಮಸೀದಿಯ ಜೊತೆಗೆ ಆಸ್ಪತ್ರೆ, ಸಮುದಾಯ ಅಡುಗೆಮನೆ, ಗ್ರಂಥಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ನಿರ್ಮಿಸಲು ಐಐಸಿಎಫ್ ಯೋಜನೆ ಪ್ರಕಟಿಸಿದೆ. ಆಸ್ಪತ್ರೆ ಮತ್ತು ಮಸೀದಿ ಸಾಮಾನ್ಯ ರಚನೆಯಾಗಿರುವುದಿಲ್ಲ. ವಾಸ್ತುಶಿಲ್ಪದೊಂದಿಗೆ ಕ್ಯಾಲಿಗ್ರಫಿ ಮತ್ತು ಇಸ್ಲಾಮಿಕ್ ಚಿಹ್ನೆಗಳನ್ನು ಹೊಂದಾಣಿಕೆ ಮಾಡಲಾಗಿರುತ್ತದೆ ಎಂದಿದ್ದಾರೆ.
1,400 ವರ್ಷಗಳ ಹಿಂದೆ ಪ್ರವಾದಿ ಪ್ರತಿಪಾದಿಸಿದಂತೆ ಆಸ್ಪತ್ರೆ ಮಾನವೀಯತೆ ಆಧರಿಸಿ ಇಸ್ಲಾಂನ ನಿಜವಾದ ಸ್ಪೂರ್ತಿಯಲ್ಲಿ ಸೇವೆ ಸಲ್ಲಿಸಲಿದೆ. ಆಸ್ಪತ್ರೆಯು ರೋಗಿಗಳಿಗೆ ಮತ್ತು ಅಶಕ್ತರಿಗೆ ಚಿಕಿತ್ಸೆ ನೀಡಿದರೆ, ಸಮುದಾಯ ಅಡುಗೆಮನೆಯು ಹಸಿದವರಿಗೆ ಆಹಾರ ನೀಡುತ್ತದೆ, ಧರ್ಮ, ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಸೇವೆ ಸಲ್ಲಿಸಲಿದೆ. ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಸಿಸಿಬಿ ದಾಳಿ : ಲಕ್ಷಾಂತರ ಮೌಲ್ಯದ ನಕಲಿ ಸಿಗರೇಟ್ ಜಪ್ತಿ
ಸಂಶೋಧನಾ ಸಂಸ್ಥೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಕೊಡುಗೆ ಮತ್ತು ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದ ಹಿಂದೂ-ಮುಸ್ಲಿಂ ಸಹೋದರತ್ವದ ಪರಂಪರೆಯನ್ನು ಅಧ್ಯಯನ ಮಾಡುತ್ತದೆ ಎಂದು ಎಂದು ಹುಸೇನ್ ಹೇಳಿದರು.
mosque, construction, work, start, Ayodhya, Dhanipur, soon,