ಬೆಂಗಳೂರು,ಜು.21- ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಕುರಿತಂತೆ ಸುಮಾರು 1530 ಅರ್ಜಿಗಳು ಪೊಲೀಸ್ ಇಲಾಖೆಗೆ ಸಲ್ಲಿಕೆಯಾಗಿವೆ. ಹಿಂದೂ ದೇವಾಲಯಗಳಿಗಿಂತ ಚರ್ಚ್ ಹಾಗೂ ಮಸೀದಿಗಳ ಆಡಳಿತ ಮಂಡಳಿ ಹೆಚ್ಚು ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಲೌಡ್ ಸ್ಪೀಕರ್ ಬಳಸುವ ಕುರಿತು ಹಲವು ನಿಯಮಗಳಿದ್ದು, ಅದನ್ನು ಪಾಲಿಸದ ಧಾರ್ಮಿಕ ಕೇಂದ್ರಗಳಿಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ಸಂಬಂಧ ಈಗ ಸುಮಾರು 1530 ಅರ್ಜಿಗಳು ಬಂದಿವೆ. ಇವುಗಳನ್ನು ವಿಂಗಡಣೆ ಮಾಡಿದರೆ ಮಸೀದಿ ಆಡಳಿತ ಮಂಡಳಿ(797)ಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಇದರಲ್ಲಿ ಸುಮಾರು 762 ಮಸೀದಿಗಳಿಗೆ ಪರಿಸರ ಇಲಾಖೆ ನಿಯಮಗಳ ಅನ್ವಯ ಅನುಮತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
358 ಚರ್ಚ್‍ಗಳಲ್ಲಿ 320ಕ್ಕೆ ಅನುಮತಿ ಸಿಕ್ಕಿದೆ. ಇನ್ನು 308 ದೇವಾಲಯಗಳಲ್ಲಿ 295ಕ್ಕೆ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಸಿಕ್ಕಿದೆ. ಈವರೆಗಿದ್ದ 10 ಲೈಸೆನ್ಸ್‍ಗಳನ್ನು ರದ್ದು ಪಡಿಸಲಾಗಿದೆ. 79 ಪರಿಶೀಲನೆಯಲ್ಲಿವೆ ಎಂದು ಹೇಳಲಾಗಿದೆ.