ಮೂವರು ಮಕ್ಕಳೊಂದಿಗೆ ಸಂಪಿಗೆ ಹಾರಿ ತಾಯಿ ಆತ್ಮಹತ್ಯೆ

Social Share

ವಿಜಯಪುರ,ಜ.29- ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯತ್ರಿಕೋಟ ತಾಲ್ಲೂಕಿನ ಜಾಲಗೆರೆ ಬಳಿಯ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.

ಪತಿ ಜೊತೆ ಜಗಳವಾಡಿದ ಬಳಿಕ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.ವಿಠಲವಾಡಿ ತಾಂಡಾದ ನಿವಾಸಿ ಗೀತಾರಾಮು ಚವ್ಹಾಣ್(32), ಸೃಷ್ಟಿ(6), ಸಮರ್ಥ್(4) ಮತ್ತು ಕಿಶನ್(3) ಮೃತಪಟ್ಟವರು.

ನಿನ್ನೆ ರಾತ್ರಿ ಗೀತಾ ಮತ್ತು ಅವರ ಪತಿ ರಾಮು ಮಧ್ಯೆ ಜಗಳವಾಗಿತ್ತಂತೆ. ಆ ಬಳಿಕ ಪತಿ ಮಲಗಿದ ವೇಳೆ ತನ್ನ ಮೂವರು ಮಕ್ಕಳೊಂದಿಗೆ ತಾಯಿ ಸಂಪ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ತ್ರಿಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಒಂದೇ ಕುಟುಂಬದ ನಾಲ್ವರ ಸಾವಿನ ಘಟನೆಯಿಂದ ಸಂಬಂಕರ ಆಕ್ರಂಧನ ಮುಗಿಲು ಮುಟ್ಟಿತ್ತು.

Mother Commit Suicide with three kids

Articles You Might Like

Share This Article