ಅಪಘಾತದಲ್ಲಿ ಪತಿ ಸಾವು, ನೊಂದ ಪತ್ನಿ ಮಗು ಕೊಂದು ಆತ್ಮಹತ್ಯೆ

ರಾಯಚೂರು,ಏ.17-ಮಂಗಳೂರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪತಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ರಾಯಚೂರಿನಲ್ಲಿದ್ದ ಪತ್ನಿ ತಮ್ಮ ಆರು ತಿಂಗಳ ಶಿಶುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ್.ಬಿ ಕಮ್ಮಾರ್(36) ಅವರು ಕುಂಟಿಖಾನ ಬಳಿ ನಿನ್ನೆ ರಾತ್ರಿ 8.50ರ ಸುಮಾರಿಗೆ ರಸ್ತೆ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ವಿಷಯ ರಾಯಚೂರಿನಲ್ಲಿದ್ದ ಅವರ ಪತ್ನಿಗೆ ತಿಳಿದು ಅವರು ಆಘಾತಕ್ಕೊಳಗಾಗಿ ಗಂಡನ ಅಗಲಿಕೆಯ ಸುದ್ದಿ ಅರಗಿಸಿಕೊಳ್ಳಲಾಗದೆ ನಿನ್ನೆ ರಾತ್ರಿ 10 ಗಂಟೆಗೆ ತನ್ನ 6 ತಿಂಗಳ ಮಗು ಅಭಿರಾಮನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದರಿಂದ ಒಂದು ಇಡೀ ಕುಟುಂಬ ದುರಂತದಲ್ಲಿ ಅಂತ್ಯಗೊಂಡಂತಾಗಿದೆ.
ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Sri Raghav

Admin