ಕುಡಿದ ಮತ್ತಲ್ಲಿ ತಾಯಿಯನ್ನು ಕೊಂದು, ಹೆಂಡತಿ ಮೇಲೆ ಹಲ್ಲೆ ಮಾಡಿದ ಕುಡುಕ..!

Social Share

ಹಾಸನ: ಕುಡಿದ ಮತ್ತಿನಲ್ಲಿದ್ದ ಮಗ ತನ್ನ ತಾಯಿಯ ಬರ್ಬರ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೇ ಮಾಡಿರುವ ಘಟನೆ ಸಂಕಲಾಪುರ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲಾಯ ಸಂಕಲಾಪುರ ಗ್ರಾಮದ ಸಣ್ಣಮ್ಮ( 68) ಹತ್ಯೆಯಾದ ಮಹಿಳೆಯಾಗಿದ್ದು, ಪತ್ನಿ ರೂಪ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಿನ್ನೆ ಕಂಠಪೂರ್ತಿ ಕುಡಿದು ಬಂದ ಪುತ್ರ ನಂಜೇಶ್ ಗೌಡ ಹೆತ್ತಮ್ಮ ನನ್ನು ಬರ್ಬರ ವಾಗಿ ಹತ್ಯೆ ಮಾಡಿದ್ದಾನೆ. ತಾಯಿಯನ್ನು ಕೊಂದ ಬಳಿಕ ಪತ್ನಿಯ ಕ್ಯಾಂಟೀನ್ ಬಳಿಬಂದು ಮಾರಣಾಂತಿಕ ಹಲ್ಲೇ ಮಾಡಿದ್ದಾರೆ.
ತಾಯಿ ಸಣ್ಣಮ್ಮ ಮೂಲತಃ ಹಾಸನ ತಾಲ್ಲೂಕಿನ ಗೋಳೇನ ಹಳ್ಳಿಯ ಸಣ್ಣಮ್ಮ ಕುಟುಂಬ ಸಂಕಲಾಪುರ ದಲ್ಲಿ ನೆಲೆಸಿತ್ತು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಘಟನೆಯಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ

Articles You Might Like

Share This Article