ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಗು ಕೊಂದ ತಾಯಿ

Social Share

ಮುಳಬಾಗಲು.ಡಿ.7- ಹೆತ್ತ ತಾಯಿಯೇ ತನ್ನ ಇಬ್ಬರು ಕರುಳ ಕುಡಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಅಂಜನಾದ್ರಿ ಬೆಟ್ಟದ ತಪ್ಪಿಲಿನಲ್ಲಿ ಕಳೆದ ರಾತ್ರಿ ನಡೆದಿದ್ದು, ಒಂದು ಮಗು ಸಾವನ್ನಪ್ಪಿದೆ.

ತಾಯಿ ಹಾಗೂ ಮತ್ತೊಂದು ಮಗು ಸುಟ್ಟ ಗಾಯಗಳಿಂದ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಆಂಧ್ರ ಪ್ರದೇಶದ ರಾಮಸಮುದ್ರದ ನಿವಾಸಿ ಜ್ಯೋತಿ ಎಂಬ ಮಹಿಳೆ ಕಳೆದ ರಾತ್ರಿ ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ಆಕೆಯೂ ಕೂಡ ಬೆಂಕಿ ಹಚ್ಚಿಕೊಂಡಿದ್ದಾರೆ,

ಮಕ್ಕಳ ಹಾಗೂ ಮಹಿಳೆಯ ಚಿರಾಟ ಕೇಳಿ ಮನೆಗಳಿಂದ ಹೊರಬಂದ ಗ್ರಾಮಸ್ಥರು ಬೆಂಕಿಯನ್ನು
ನಂದಿಸಿ ಮೂವರನ್ನು ರಕ್ಷಿಸಲು ಮುಂದಾದರು. ಅಷ್ಟರೊಳಗೆ ಮಗುವೊಂದು ಸಂಪೂರ್ಣವಾಗಿ ಸುಟ್ಟು ಸ್ಥಳದಲ್ಲೇ ಸಾವನ್ನಪ್ಪಿದೆ.

ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

ತಾಯಿ ಹಾಗೂ ಮತ್ತೊಂದು ಮಗು ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂತಜರ್ತಿ ವಿವಾಹವಾಗಿದ್ದು ಜ್ಯೋತಿಯ ಕುಟುಂಬದಲ್ಲಿ ಕಲಹ ಉಂಟಾಗಿ ಪ್ರತಿನಿತ್ಯ ಪತಿ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರಿಂದ ಮನನೊಂದು ನೆರಯ ಆಂಧ್ರದಿಂದ ಬಂದು ಬೆಟ್ಟದ ತಪ್ಪಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಮುಂದಿನ ಕ್ರಮ ಕೈಗೊಂಡಿದ್ದಾರೆ.

Mother, kills, child, Mulbagalu,

Articles You Might Like

Share This Article