ಕಾರಿಗೆ ಟ್ರಕ್ ಡಿಕ್ಕಿ ; ತಾಯಿ-ಮಗ ಸೇರಿ ನಾಲ್ವರ ದುರ್ಮರಣ

Social Share

ರಾಯ್‍ಪುರ್,ಫೆ.22- ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಛತ್ತೀಸ್‍ಗಢದ ಬಲೋದ್ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು ಸಿಮ್ರಾನ್ ಸಲೂಜಾ (48), ಆಕೆಯ ಮಗ ರಾಜವೀರ್ ಸಲೂಜಾ (19), ಅಶೋಕ್ ಮತ್ತು ಉಮೇಶ್ ಸಾಹು (24) ಎಂದು ಗುರುತಿಸಲಾಗಿದೆ.

ರಾಜಧಾನಿ ರಾಯ್‍ಪುರದಿಂದ ಬಲೋದ್‍ಗೆ ತೆರಳುತ್ತಿದ್ದಾಗ ಗುಂಡರ್‍ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರವಾಡ ಗ್ರಾಮದ ಬಳಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲೋಡ್ ನಿವಾಸಿಗಳಾದ ಮಹಿಳೆ ಮತ್ತು ಅವರ ಮಗ ತನ್ನ ಕಾರಿನಲ್ಲಿ ಕುಟುಂಬ ಕೆಲಸಕ್ಕಾಗಿ ರಾಯ್‍ಪುರಕ್ಕೆ ತೆರಳಿದ್ದರು. ರಾಯ್‍ಪುರದಲ್ಲಿ ಅವರ ಕಾರು ಕೆಟ್ಟುಹೋದ ನಂತರ, ಅವರು ಮತ್ತೊಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ಚಾಲಕ ಅಶೋಕ್‍ನೊಂದಿಗೆ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ.

ಎದುರು ದಿಕ್ಕಿನಿಂದ ಬರುತ್ತಿದ್ದ ಕಬ್ಬಿಣದ ಅದಿರು ತುಂಬಿದ ಟ್ರಕ್‍ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಲು ಜಪ್ತಿ ವೇಳೆ ಪೊಲೀಸರ ಕಿರುಕುಳ : ಶರವಣ ಆಕ್ರೋಶ

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Mother, Son, 4 Killed, Car, Truck, Collision, Chhattisgarh,

Articles You Might Like

Share This Article