ದೆಹಲಿಯಲ್ಲಿ ಮತ್ತೊಂದು ವಿಕೃತ ಕೊಲೆ, ಪತಿಯನ್ನು 22 ತುಂಡು ಮಾಡಿದ ಪತ್ನಿ ಮತ್ತು ಪುತ್ರ..!

Social Share

ನವದೆಹಲಿ, ನ.28- ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಬೆಳಕಿಗೆ ಬಂದು ತಿಂಗಳು ಕಳೆಯುವ ಮುನ್ನವೇ ದೆಹಲಿಯಲ್ಲಿ ಮತ್ತೊಂದು ಭಯಾನಕ ಹತ್ಯೆಯೊಂದು ಬಹಿರಂಗಗೊಂಡಿದ್ದು, ಆರೋಪಿಗಳಾದ ತಾಯಿ-ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಅಂಜನ್‍ದಾಸ್ ಎಂಬ ವ್ಯಕ್ತಿ ಹತ್ಯೆಯಾಗಿದ್ದು, ಆತನ ದೇಹವನ್ನು ಪತ್ನಿ ಹಾಗೂ ಮಗ ಸೇರಿಕೊಂಡು 22 ತುಂಡುಗಳಾಗಿ ಕತ್ತರಿಸಿ, ರೆಫ್ರಿಜರೇಟರ್‍ನಲ್ಲಿಟ್ಟು ಹಂತ ಹಂತವಾಗಿ ದೇಹದ ಭಾಗಗಳನ್ನು ಬೇರೆ ವಿಸರ್ಜನೆ ಮಾಡುತ್ತಿದ್ದರು ಎನ್ನಲಾಗಿದೆ.

ದೆಹಲಿಯ ಪಾಂಡವನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರಿ ಪ್ರದೇಶದ ಬ್ಲಾಕ್ ಸಂಖ್ಯೆ 20ರ ರಾಮಲೀಲಾ ಮೈದಾನದ ಪಕ್ಕದ ಪೊದೆಗಳಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬ್ಯಾಗ್‍ವೊಂದು ಪತ್ತೆಯಾಗಿದ್ದು, ಅದರಲ್ಲಿ ಕತ್ತರಿಸಿದ ಮನುಷ್ಯನ ದೇಹದ ಭಾಗಗಳನ್ನು ತುಂಬಿರುವುದು ಕಂಡು ಬಂದಿತ್ತು.

ಸಿಸಿಟಿವಿ ಪರಿಶೀಲನೆ ನಡೆಸಿದಾಗ ರಾತ್ರಿ ವೇಳೆ ಯುವಕನೊಬ್ಬ ಪ್ರಯಾಸದಿಂದ ಚೀಲ ಹಿಡಿದು ಆ ಸ್ಥಳಕ್ಕೆ ಹೋಗಿರುವುದು, ಹಿಂದೆಯೇ ಮಹಿಳೆಯೊಬ್ಬರು ಹಿಂಬಾಲಿಸಿರುವುದು ಕಂಡು ಬಂದಿದೆ. ಮಾರನೇ ದಿನ ಬೆಳಕಿನಲ್ಲಿ ಮತ್ತೆ ಇಬ್ಬರು ಅದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಳನೆ ನಡೆಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಸದರಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ವಿಕೃತ ಕೊಲೆ ಬೆಳಕಿಗೆ ಬಂದಿದೆ.

ಅಂಜನ್ ದಾಸ್ ಅಕ್ರಮ ಸಂಬಂಧ ಹೊಂದಿದ್ದ ಮತ್ತು ಕುಡಿದು ಬಂದು ಪತ್ನಿ ಹಾಗೂ ಪುತ್ರನಿಗೆ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಪೂನಂ ಮತ್ತು ಪುತ್ರ ದೀಪಕ್ ಸಂಚು ರೂಪಿಸಿ ಹತ್ಯೆ ಮಾಡಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಕೆಲವು ಶಾಸಕರಿಗೆ ಆತಂಕ ಮೂಡಿಸಿದೆ ಟಿಕೆಟ್ ಕುರಿತ ಬಿ.ಎಲ್.ಸಂತೋಷ್ ಹೇಳಿಕೆ

ಆರೋಪಿಗಳು ನಿದ್ದೆ ಮಾತ್ರೆ ಬೆರೆಸಿ ಅಂಜನ್‍ದಾಸ್‍ಗೆ ಊಟ ನೀಡಿದ್ದು, ಆತ ಮಲಗಿದ ಮೇಲೆ ಕೊಲೆ ಮಾಡಲಾಗಿದೆ. ದೇಹವನ್ನು 22 ತುಂಡುಗಳನ್ನಾಗಿ ಕತ್ತರಿಸಿದ್ದಾರೆ. ನಂತರ ಅದನ್ನು ಪ್ರೀಜ್ಡ್‍ನಲ್ಲಿ ಬಚ್ಚಿಡಲಾಗಿದೆ. ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ಮೈದಾನದ ತಡೆಗೋಡೆಯಾಚೆಗಿನ ಪೊದೆಗಳಿಗೆ ಎಸೆದು ಬರಲಾಗುತ್ತಿತ್ತು ಂದು ಪೊಲೀಸರು ತಿಳಿಸಿದ್ದಾರೆ.

ಅಂಜನ್‍ದಾಸ್‍ನನ್ನು ದೆಹಲಿಯ ತ್ರೀಲೋಕಪುರಿಯ ಆತನ ಮನೆಯಲ್ಲಿ ಹತ್ಯೆ ಮಾಡಲಾಗಿದೆ. ದೇಹದ ಭಾಗಗಳನ್ನು ದೂರದ ರಾಮಲೀಲಾ ಮೈದಾನಕ್ಕೆ ತಂದು ಎಸೆಯಲಾಗಿದೆ. ಪೊಲೀಸರು ತಾಯಿ ಮಗನ್ನು ಬಂಸಿ ವಿಚಾರಣೆ ನಡೆಸಿದ್ದು, ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಹೇಳಿದ್ದಾರೆ.

ದೆಹಲಿಯ ಮೆಹ್ರೋಲಿಯಲ್ಲಿ ಅಫ್ತಾಬ್ ಪೋನಾವಾಲ ತನ್ನ ಸಂಗಾತಿ ಶ್ರದ್ಧಾ ವಾಲ್ಕರ್‍ನನ್ನು ಹತ್ಯೆ ಮಾಡಿ, 35 ತುಂಡುಗಳನ್ನಾಗಿ ಕತ್ತರಿಸಿ 300 ಲೀಟರ್ ಪ್ರಿಜ್ಡ್‍ನಲ್ಲಿಟ್ಟಿದ್ದ, ನಂತರ ದೇಹದ ಭಾಗಗಳನ್ನು ಹಂತ ಹಂತವಾಗಿ ಸಾಗಿಸಿ ಅರಣ್ಯ ಪ್ರದೇಶದಲ್ಲಿ ವಿಸರ್ಜನೆ ಮಾಡಿದ್ದ.

ಆ ಪ್ರಕರಣ ಬೆಳಕಿಗೆ ಬಂದು ತಿಂಗಳು ಕಳೆಯುವುದರೊಳಗೆ ಮತ್ತೊಂದು ಅದೇ ಮಾದರಿಯ ಪ್ರಕರಣ ಬಯಲಾಗಿದ್ದು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಖುದ್ದು ಪತ್ನಿ ಮತ್ತು ಪುತ್ರನೇ ಈ ಕೃತ್ಯ ನಡೆಸಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

#MotherAndSon, #arrested, #killing, #father, #chopping, #DeadBody,

Articles You Might Like

Share This Article