ಮೌಂಟ್ ಎವರೆಸ್ಟ್ ಈಗ ವಿಶ್ವದ ಅತಿ ಎತ್ತರದ ಕಸದ ರಾಶಿ..!

Mount-Evarest--014
ಕಠ್ಮಂಡು, ಜೂ.17-ವಿಶ್ವದ ಅತ್ಯುನ್ನತ ಶಿಖರಾಗ್ರ ಎಂಬ ಖ್ಯಾತಿ ಪಡೆದಿರುವ ಮೌಂಟ್ ಎವರೆಸ್ಟ್ ಈಗ ಜಗತ್ತಿನ ಅತಿ ಎತ್ತರದ ಕಸದ ರಾಶಿ ಎಂಬ ಕುಖ್ಯಾತಿಯನ್ನೂ ಪಡೆದಿದೆ. ಹಲವು ದಶಕಗಳಿಂದಲೂ ಮೌಂಟ್ ಎವರೆಸ್ಟ್ ವಾಣಿಜ್ಯ ಶಿಖರಾರೋಹಣವಾಗಿ ಪರಿವರ್ತಿತವಾಗಿದ್ದು ಪರ್ವತಾರೋಹಿಗಳು ಅಲ್ಲಿ ಸುರಿಯುತ್ತಿರುವ ಕಸ ದೊಡ್ಡ ರಾಶಿಯಾಗಿದೆ. ಇದು ಈಗ ಮೌಂಟ್ ಎವರೆಸ್ಟ್ ಪ್ರಪಂಚದ ಅತ್ಯಂತ ಎತ್ತರದ ಕಸದ ದೊಡ್ಡಿ ಎಂಬ ಅಪಖ್ಯಾತಿಗೂ ಕಾರಣವಾಗಿದೆ.

Mount-Evarest--x4

ಅಲ್ಲಿಗೆ ತೆರಳುವ ಸಾಹಸಿಗರು ಮತ್ತು ಪರ್ವತಾರೋಹಿಗಳು ತಮ್ಮ ಗುರಿ ಸಾಧನೆ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಅಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಾರೆ. ಅವರಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪೋರೊಸೆಂಟ್ ಟೆಂಟ್‍ಗಳು, ಬಳಸಿ ಎಸೆಯಲಾದ ಶಿಲಾರೋಹಣ ಸಾಧನಗಳು, ಖಾಲಿ ಗ್ಯಾಸ್ ಕ್ಯಾನಿಸ್ಟರ್ ಸಿಲೆಂಡರ್‍ಗಳು ಹಾಗೂ ಮಾನವರ ಮಲ ವಿರ್ಸಜನೆಗಳು ಈಗ 29,029 ಎತ್ತರದ ಮೌಂಟ್ ಎವರೆಸ್ಟ್‍ನ ಮಾರ್ಗದಲ್ಲಿ ಕಾಣಸಿಗುತ್ತವೆ.  ಈ ವರ್ಷ 600ಕ್ಕೂ ಹೆಚ್ಚು ಮಂದಿ ಮೌಂಟ್ ಎವರೆಸ್ಟ್ ಶಿಖರಾರೋಹಣ ಮಾಡಿದ್ದು, ತಮ್ಮೊಂದಿಗೆ ಟನ್ನುಗಟ್ಟಲೆ ಕಸವನ್ನು ಅಲ್ಲಿ ಹಾಕಿದ್ದಾರೆ. ದಿನೇ ದಿನೇ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

dddd

Mount-Evarest--x3

Mount-Evarest--x2

Mount-Evarest--x1

 

Sri Raghav

Admin