ಭೂಪಾಲ್,ಡಿ.25- ಮದುವೆಯಾಗುವಂತೆ ಒತ್ತಾಯಿಸಿದ್ದ ಪ್ರೇಮಿಯನ್ನು ಥಳಿಸಿ, ಮುಖವನ್ನು ತುಳಿದು ಅಮಾನುಷವಾಗಿ ವರ್ತಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ಲಾಗಿತ್ತು. ಅದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಪಂಕಜ್ ತ್ರಿಪಾಟಿಯನ್ನು ಬಂಧಿಸಿದ್ದಾರೆ.
ಆತನ 19 ವರ್ಷದ ಗೆಳತಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ ಹಿನ್ನಲೆಯಲ್ಲಿ ಸಿಟ್ಟುಗೆದ್ದ ಆತ ಸ್ವಗ್ರಾಮದ ಧೇರಾದಲ್ಲಿ ಹಲ್ಲೆ ನಡೆಸಿದ್ದ. ವಿಡಿಯೋದಲ್ಲಿ ಪಂಕಜ್ ಮತ್ತು ಯುವತಿ ಮಾತುಕತೆ ನಡೆಸುತ್ತಿದ್ದು, ಮದುವೆಯಾಗುವ ಬಗ್ಗೆ ಪ್ರಸ್ತಾಪಿಸಿದ್ದಾಳೆ.
ಹಕ್ಕಿಜ್ವರ ಭೀತಿ : ಕೇರಳದಲ್ಲಿ 6 ಸಾವಿರಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ
ಆತ ತನ್ನ ಬಳಿಯಿದ್ದ ಗೋಣಿಚೀಲವನ್ನು ಕೆಳಗಿಳಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕೆಳಗೆ ಬಿದ್ದ ಆಕೆಯ ಕಾಲು ಮತ್ತು ಮುಖದ ಭಾಗಕ್ಕೆ ಬಲವಾಗಿ ತುಳಿದಿದ್ದಾನೆ. ತಲೆಯ ಭಾಗಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ತುಳಿದಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಕೊನೆಗೆ ಈತನೇ ಆಕೆಯನ್ನು ಬಲವಂತವಾಗಿ ಎದ್ದು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ.
ಆದರೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ಕೈಕಾಲುಗಳು ಜೋತುಬಿದ್ದಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಅಮಾನುಷವಾದ ಈ ಕೃತ್ಯ ವ್ಯಾಪಕ ಖಂಡನೆಗೆ ಗುರಿಯಾಗಿತ್ತು.
MP man, slapped, kicked, girlfriend, arrested, video viral,