ಬೆಂಗಳೂರು, ಜ.14-ರಾಜಕೀಯ ಕಾರ್ಯದರ್ಶಿ ಹುದ್ದೆ ಕೇವಲ ಹೋದ್ಯ ಪುಟ್ಟ, ಬಂದ್ಯಾ ಪುಟ್ಟ ಎಂಬಂತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೇಂಬರ್ ಮತ್ತು ಚೇರು ಬಿಟ್ಟರೆ ಈ ಹುದ್ದೆಯಲ್ಲಿ ಮತ್ತೇನೂ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಿಡಿ: ಸರ್ಕಾರವನ್ನು ಅಸ್ತಿರ ಗೊಳಿಸಲು , ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಟಕೀಯವಾಗಿ ಪಾದಯಾತ್ರೆ ಮಾಡಿದ್ದರು ಎಂದು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪಾದಯಾತ್ರೆ ಇಷ್ಟ ವಿರಲಿಲ್ಲ. ಡಿಕೆಶಿ ನಾಯಕರಾಗಿ ಎಲ್ಲಿ ಹೊರ ಹೊಮ್ಮುತ್ತಾರೋ , ಡಿಕೆಶಿಯನ್ನ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡ್ತಾರೆನೋ ಅನ್ನೋ ಆತಂಕವೂ ಇತ್ತು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರ ಪಟಾಲಂ, ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಒಂದು ಕಡೆ ಘೋಷಣೆ ಕೂಗ್ತಿದ್ರು. ಕಾಂಗ್ರೆಸ್ ನವರಿಗೆ ಪಾದಯಾತ್ರೆ ಅಭ್ಯಾಸ ಇರಲಿಲ್ಲ. ಹೇಗಿದ್ದರೂ, ಬಂಧಿಸ್ತಾರೆ ಅನ್ನೋ ನಂಬಿಕೆಯಿಂದ ಪಾದಯಾತ್ರೆ ಮಾಡುತ್ತಿದ್ದರು ಎಂದ ಅವರು, ಹಿಂದೆ ನಮ್ಮ ನಾಯಕ ಯಡಿಯೂರಪ್ಪ ಹೋರಾಟ ಮಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಡಿ.ಕೆ. ಶಿವಕುಮಾರ್ ಹೊಸ ಟ್ರಾಕ್ ಪ್ಯಾಂಟï, ಶೂ ಎಲ್ಲಾ ಖರೀದಿಸಿದ್ದರು. ರ್ಯಾಂಪ್ ವಾಕ್ ಮಾಡಿ ರಿಹರ್ಸಲ್ ಮಾಡುತ್ತಿದ್ದರು ಎಂದರು.
ನಮ್ಮ ಹಳ್ಳಿ ಕಡೆ ತಾಲೀಮು ಮಾಡಿಸಿದ ಬಳಿಕ, ನಾಟಕವನ್ನು ಪರದೆ ಮೇಲೆ ತರುತ್ತಿದ್ದರು.ಹಾಗೆ ಡಿಕೆಶಿ ಪಾದಯಾತ್ರೆ ರಿಹರ್ಸಲ್ ಮಾಡಿದ್ದರು ಎಂದು ಲೇವಡಿ ಮಾಡಿದ್ದಾರೆ.ಹೋದ ಕಡೆಯಲ್ಲಾಲ್ಲ ಗಂಡಸ್ತನ, ತಾಕತ್ತು ಅಂತ ಮಾತಾಡ್ತಿದ್ದರು. ಅಧಿಕಾರದಲ್ಲಿ ಇದ್ದಾಗ ಗಂಡಸ್ತನ ತೋರಿಸಲಿಲ್ಲ, ಅಭಿವೃದ್ಧಿ ವಿಚಾರದಲ್ಲಿ.ಈ ಮಾತು ನಿಮಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ಎಲ್ಲಾ ಕಡೆ ರೇಣುಕಾಚಾರ್ಯ ವಿಚಾರವನ್ನೇ ಕಾಂಗ್ರೆಸ್‍ನವರು ಜಪಿಸಿದ್ದರು. ಆದರೆ, ಸಿದ್ದರಾಮಯ್ಯ, ಡಿಕೆಶಿಯವರದು ಬಂಡತನ ಪರಮಾವದಿಯನ್ನು ಪ್ರದರ್ಶನ ಮಾಡಿಲ್ಲ. ನಾನು ಮಾದ್ಯಮದ ಮೂಲಕ ರಾಜ್ಯದ ಜನರ ಕ್ಷಮೆ ಕೇಳಿದ್ದೀನಿ. ಇಷ್ಟೆಲ್ಲಾ ಆದ ಮೇಲೂ ನನ್ನ ಮೇಲೆ ಮೊಕದ್ದಮೆ ಹಾಕಿ ಅಂತ ಪಟ್ಟು ಹಿಡಿದಿದ್ದಾರೆ ಎಂದು ಹೇಳಿದರು.
ಕ್ಷಮೆ ಯಾಚಿಸಿ: ಕಾಂಗ್ರೆಸ್ ನವರು ನಾಡಿನ ಜನತೆ ಮುಂದೆ ಬೇಷರತ್ ಕ್ಷಮೆ ಯಾಚಿಸುಂತೆ ಆಗ್ರಹಿಸಿರುವ ಅವರು ಅಂದು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಶಕ್ತಿ ತೋರಿದ್ದರೆ, ಇಂದು ನಾಟಕೀಯ ಪ್ರದರ್ಶನ ಬೇಕಿರಲಿಲ್ಲ ಎಂದರು.
2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ವಿಶ್ವಾಸ ವ್ಯಕ್ತ ಪಡಿಸಿದ ಅವರು, ನೀವು ಪ್ರತಿ ಪಕ್ಷದ ಸ್ಥಾನದಲ್ಲೂ ಕೂರಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
