ಸುಧಾಕರ್ ಜತೆ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲ : ರೇಣುಕಾಚಾರ್ಯ

Spread the love

ದಾವಣಗೆರೆ, ಅ.20- ಆರೋಗ್ಯ ಸಚಿವ ಸುಧಾಕರ್ ಹಾಗೂ ನನ್ನ ನಡುವೆ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‍ವೈ ಅವರನ್ನು ಯಾರೂ ಸೈಡ್‍ಲೈನ್ ಮಾಡಿಲ್ಲ, ಮಾಡುವ ಪ್ರಶ್ನೆಯೂ ಇಲ್ಲ. ಉಪಚುನಾವಣೆಯಲ್ಲಿ ಬಿಎಸ್‍ವೈ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ಪಕ್ಷವಾಗಲಿ, ವರಿಷ್ಠರಾಗಲಿ ಸೈಡ್‍ಲೈನ್ ಮಾಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಟಿಪ್ಪು ಜಯಂತಿ ಜಾರಿಗೊಳಿಸಿದ್ದರು. ಅದು ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಉಪಚುನಾವಣೆಯಲ್ಲಿ ವಿರೋಗಳ ಗಿಮಿಕ್ ನಡೆಯಲ್ಲ. ನಾನು ಮೂಲತಃ ಜೆಪಿ ಚಳವಳಿಯಿಂದ ಬಂದವನು. ಹಿಂದುತ್ವದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ಪಿಯುಸಿ ಅಧ್ಯಯನದ ಸಂದರ್ಭದಲ್ಲಿ ಆರ್‍ಎಸ್‍ಎಸ್ ಸಂಪರ್ಕಕ್ಕೆ ಬಂದೆ. ರಾಮಮಂದಿರ ರಥ ಯಾತ್ರೆಯಿಂದ ಸಂಪೂರ್ಣ ಬಿಜೆಪಿಯಲ್ಲಿ ತೊಡಗಿಸಿಕೊಂಡೆ ಎಂದು ತಮ್ಮ ರಾಜಕೀಯ ಜೀವನದ ಬಗ್ಗೆ ಮೆಲುಕು ಹಾಕಿದರು.

ಮುಸ್ಲಿಮರು ಜೈ ಶ್ರೀರಾಮ್ ಎಂದು ಹೇಳುವ ವಿಡಿಯೋಗಳು ನನ್ನ ಕಡೆ ಇವೆ. ಪಾಕಿಸ್ತಾನದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೆ ಕೊಚ್ಚಿ ಹಾಕ್ತಾರೆ. ಆದರೆ ನಮ್ಮ ಪ್ರತಿಪಕ್ಷದ ನಾಯಕರು ಹಾಗೂ ಹೆಚ್‍ಡಿಕೆ ಹಿಂದುತ್ವದ ವಿರೋಯಾಗಿ ಅಲ್ಪಸಂಖ್ಯಾತರ ಓಲೈಸುವ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments