ಶಿಯೋಪುರ್ (ಮಧ್ಯ ಪ್ರದೇಶ), ಜ. 18 – ರಾಜ್ಯದ ಶಿಯೋಪುರ್ ಜಿಲ್ಲಾಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಗೆ ವಾಟ್ಸಾಪ್ ಆನ್ ಲೈನ್ ತರಗತಿ ವೇಳೆ ಆಕ್ಷೇಪಾರ್ಹ ಮುಜುಗರ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಕಿಲಾ ಶಿಯೋಪುರದ ಸರ್ಕಾರಿ ಶಾಲೆಯ ಕಾರ್ಯನಿರ್ವಹಿಸುತ್ತರುವ ಇನ್ಸಾಫ್ ಮೊಹಮ್ಮದ್ ಅಮಾನತುಗೊಂಡ ಶಿಕ್ಷಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗಾಗಿ ರಚಿಸಲಾಗಿದ್ದ ವಾಟ್ಸಾಪ್ ಗ್ರೂಪ್‍ನಲ್ಲಿ ಸೋಮವಾರ ಬೆಳಗ್ಗೆ ಅಸಭ್ಯ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಶಿಕ್ಷಕನ ವರ್ತನೆ ಬಗ್ಗೆ ಹಲವರು ಕಿಡಿಕಾರಿದ್ದರು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಸೋಲಂಕಿ ತಿಳಿಸಿದ್ದಾರೆ . ಇದರ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಣದು ಆದೇಶದಲ್ಲಿ ತಿಳಿಸಲಾಗಿದೆ.
ಹೊರಡಿಸಿದ್ದಾರೆ.
