ಮಾನವೀಯತೆ ದೃಷ್ಟಿಯಿಂದ ದಸರಾದಲ್ಲಿ ಭಾಗವಹಿಸಲಿಲ್ಲ : ಶ್ರೀನಿವಾಸಪ್ರಸಾದ್

Spread the love

ಮೈಸೂರು, ಸೆ.29-ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವೈಭವೋಪೇತ ದಸರಾ ಬದಲಾಗಿ ಸಾಂಪ್ರದಾಯಿಕವಾಗಿ ಸರಳ ದಸರಾ ಆಚರಣೆ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ರಾಜ್ಯಸರ್ಕಾರ ಅದನ್ನು ತಿರಸ್ಕರಿಸಿ ಅದ್ಧೂರಿ ಖರ್ಚು ಮಾಡುತ್ತಿದೆ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಸರಾ ಆಚರಣೆಯಿಂದ ದೂರ ಉಳಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಕೆಲಸ ಸ್ಪಷ್ಟನೆಗಳನ್ನು ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾನು ದಸರಾದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದರು.

ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಕಷ್ಟಗಳಿಗೆ ನಾವು ಸ್ಪಂದಿಸಬೇಕಿದೆ. ಇಲ್ಲಿ ಅದ್ದೂರಿ ವೆಚ್ಚ ಮಾಡುವುದು ಬೇಡ, ಹಾಗೆಂದು ದಸರಾ ನಿಲ್ಲಿಸಬೇಡಿ. ಮುಖ್ಯಮಂತ್ರಿಗಳು ಮೈಸೂರಿಗೆ ಬರಲಿ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಉದ್ಘಾಟನೆ ಮಾಡಲಿ. ಹತ್ತು ದಿನಗಳ ಸಾಂಪ್ರದಾಯಿಕವಾಗಿ ಆಚರಣೆಗಳು ನಡೆಯಲಿ.

ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ಉನ್ನತ ಸಮಿತಿಯಲ್ಲಿ ಸಲಹೆ ನೀಡಿದ್ದೆ. ಆದರೆ ಅದ್ಧೂರಿಯಾಗಿಯೇ ದಸರಾ ಆಚರಿಸಲಾಗುತ್ತಿದೆ. ಅದರಲ್ಲಿ ಭಾಗವಹಿಸಲು ನನ್ನ ಮನಸ್ಸು ಬರಲಿಲ್ಲ ಎಂದು ಹೇಳಿದರು.

Facebook Comments