ಎಸ್.ಎಂ.ಕೆ. ಭೇಟಿಯಾದ ಸುಮಲತಾ

Social Share

ಬೆಂಗಳೂರು, ಮಾ.4- ನಾನು ರಾಜಕೀಯ ನಪಕ್ಷ ಸೇರುವುದಾದರೆ ಲೋಕಸಭೆಗೆ ಆಯ್ಕೆಯಾದ ಆರು ತಿಂಗಳಲ್ಲೇ ಸೇರುತ್ತಿದ್ದೆ ಎಂದು ಮಂಡ್ಯ ಸಂಸದರಾದ ಸುಮಲತಾ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ನಾಲ್ಕು ವರ್ಷ ನಾನು ಬೆಳವಣಿಗೆಯನ್ನು ಗಮನಿಸಲು ಬಯಸಿದ್ದೆ. ಎಲ್ಲರ ಜೊತೆಯೂ ಚರ್ಚಿಸಿ ಸಲಹೆ ಕೇಳಬೇಕಾಗಿದೆ.

ಮುಂದೆ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂಧರ್ಭದ ಬಗ್ಗೆಯೂ ಯಾವ ತೀರ್ಮಾನವನ್ನೂ ಮಾಡಿಲ್ಲ. ಎಲ್ಲಾ ರೀತಿಯ ವಿಚಾರವನ್ನೂ ಪರಿಗಣಿಸಿ ನಿರ್ಧಾರ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.

ರಷ್ಯಾದಲ್ಲಿ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆ ಶೋಧಿಸಿದ ವಿಜ್ಞಾನಿಯ ಹತ್ಯೆ

ಕೃಷ್ಣ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರಾಗಿದ್ದು, ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದೆ. ಪ್ರಶ್ಸ್ತಿ ಘೋಷಣೆಯಾದ ಬಳಿಕ ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಮಂಡ್ಯದಿಂದ ಹಲವರು ಬಂದಿದ್ದು, ಅವರೆಲ್ಲರ ಜತೆ ಚರ್ಚೆ ಮಾಡುತ್ತೇನೆ. ನಾನು ಯಾವುದೇ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಹಲವರ ಜೊತೆ ಚರ್ಚೆ ಮಾಡಬೇಕು. ನನ್ನ ಲಾಭ ಅಥವಾ ನಷ್ಟ ನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆ ಇರುವವರ ಬಗ್ಗೆಯೂ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು.

ಕೃಷಿ ಸುಧಾರಣೆಗೆ ಡಿಜಿಟಲ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ

ನಮ್ಮ ಮನೆಯಲ್ಲಿನ ಇಂದಿನ ಸಭೆಗೂ ಕೃಷ್ಣ ಅವರ ಭೇಟಿಗೂ ಯಾವುದೇ ಸಂಬಂಧ ಇಲ್ಲ. ಸಭೆ ನಾನು ಕರೆದಿಲ್ಲ. ಬೆಂಬಲಿಗರು ಯಾವಾಗ ಬರಬೇಕೆಂದು ಕೇಳಿದಾಗ ಇವತ್ತು ಬನ್ನಿ ಅಂದಿದ್ದೇನೆ ಅಷ್ಟೇ ಎಂದರು.

Mp Sumalatha, meets, SM Krishna, Bengaluru,

Articles You Might Like

Share This Article