ಧೋನಿ ನಿರ್ಮಾಣದ ಚಿತ್ರಕ್ಕೆ ನಯನತಾರಾ ನಾಯಕಿ

Spread the love

ಚೆನ್ನೈ, ಮೇ 12- ಐಪಿಎಲ್‍ನಿಂದ ಚೆನ್ನೈನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ತಲಾ ಧೋನಿ ಈಗ ಕಾಲಿವುಡ್ ಚಿತ್ರವೊಂದನ್ನು ನಿರ್ಮಿ ಸುವ ಮೂಲಕ ಗಮನ ಸೆಳೆಯಲು ಹೊರಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೀವನ ಆಧಾರಿಸಿ ` ಎಂ ಎಸ್ ಧೋನಿ ದಿ ಅನ್‍ಟೋಲ್ಡ್ ಸ್ಟೋರಿ’ ಎಂಬ ಬಾಲಿವುಡ್ ಚಿತ್ರವೊಂದು ಮೂಡಿಬಂದಿತ್ತು, ಅಲ್ಲದೆ ಧೋನಿ ಹಲವು ಜಾಹೀರಾತುಗಳಲ್ಲಿ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಗಮನ ಸೆಳೆದಿದ್ದರು.

ಧೋನಿಗಿರುವ ಈ ಟ್ಯಾಲೆಂಟ್ ನೋಡಿ ಅವರು ಚಿತ್ರಗಳಲ್ಲಿ ನಟಿಸಬಹುದು ಎಂದು ಹಲವರು ತಮ್ಮ ಅನಿಸಿಕೆಯನ್ನು ಹಂಚಿ ಕೊಂಡಿದ್ದರಾದರೂ ಧೋನಿ ಈಗ ತಮಿಳು ಚಿತ್ರವೊಂದನ್ನು ನಿರ್ಮಿಸುವತ್ತ ಗಮನ ಹರಿಸಿ ದ್ದಾರೆ.

ರಜನಿಕಾಂತ್ ನಟನೆ:
ತಮಿಳುನಾಡಿನ ಜನ ಧೋನಿ ಯನ್ನು ಪ್ರೀತಿಯಿಂದ ತಲಾ ಎಂದು ಕರೆಯುತ್ತಿದ್ದು, ಇವರ ನಿರ್ಮಾಣದ ಚೊಚ್ಚಲ ಚಿತ್ರದಲ್ಲಿ ತಲೈವಾ ಸೂಪರ್ ಸ್ಟಾರ್ ರಜನಿ ಕಾಂತ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಕೂಡ ಎದ್ದಿವೆ.

ಲೇಡಿ ಸೂಪರ್‍ ಸ್ಟಾರ್ ನಾಯಕಿ:
ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ನಯನತಾರಾ ಅವರು ಈ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ, ಇತ್ತೀಚೆಗೆ ನಯನ ತಾರಾ ನಟಿಸಿದ್ದ `ಕಾತು ವಕುಲಾ ಎರಡು ಕಾದಲ್’ ಚಿತ್ರ ಸಕ್ಸಸ್‍ಫುಲ್ ಆಗಿದ್ದು, ಈಗ ಅವರು ಬಾಲಿವುಡ್‍ನ ಸೂಪರ್‍ ಸ್ಟಾರ್ ಶಾರುಕ್‍ಖಾನ್ ಹಾಗೂ ಅಟ್ಲಿ ಕಾಂಬಿನೇಷನ್ ` ಲಯನ್’ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ, ಈ ಸಿನಿಮಾ ಮುಗಿದ ನಂತರ ಅವರು ಧೋನಿ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರಂತೆ.

ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿಯಾದ ನಂತರ ಕೃಷಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಈಗ ಸಿನಿಮಾ ನಿರ್ಮಾಣದತ್ತಲೂ ಚಿತ್ತ ಹರಿಸಿದ್ದು ಅದಕ್ಕಾಗಿ ಸಂಜಯ್ ಎಂಬುವವರನ್ನು ತಮ್ಮ ಅಸೋಸಿಯೇಟ್ ಆಗಿ ನೇಮಿಸಿಕೊಂಡಿದ್ದಾರೆ.
ಕ್ರಿಕೆಟ್ ರಂಗದಲ್ಲಿ ಹೆಸರು ಮಾಡಿರುವ ಲಕ್ಕಿ ಕ್ಯಾಪ್ಟನ್ ಎಂ.ಎಸ್. ಧೋನಿ ನಿರ್ಮಾಪಕ ರಾಗಿಯೂ ಮಿಂಚುವಂತಾಗಲಿ.

Facebook Comments