Saturday, September 23, 2023
Homeಅಂತಾರಾಷ್ಟ್ರೀಯಟ್ರಂಪ್‍ ಜೊತೆ ಗಾಲ್ಫ್ ಆಡಿದ ಧೋನಿ

ಟ್ರಂಪ್‍ ಜೊತೆ ಗಾಲ್ಫ್ ಆಡಿದ ಧೋನಿ

- Advertisement -

ನವದೆಹಲಿ, ಸೆ.8- ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಎಂ.ಎಸ್. ಧೋನಿ ಅವರು ಮತ್ತೆ ಪ್ರಚಲಿತ ಮಾನಕ್ಕೆ ಬಂದಿದ್ದಾರೆ. ಆದರೆ ಈ ಬಾರಿ ಅವರು ಕ್ರಿಕೆಟ್‍ವಿಷಯಕ್ಕಲ್ಲದೆ ಬೇರೆ ರೀತಿಯೇ ಸುದ್ದಿಯಾಗಿದ್ದಾರೆ. ಇತ್ತೀಚೆಗೆ 2023ನೇ ಸಾಲಿನ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಕಾಣಿಸಿ ಕೊಂಡು ಗಮನ ಸೆಳೆದಿದ್ದ ಎಂಎಸ್‍ಡಿ, ಈಗ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರೊಂದಿಗೆ ಗಾಲ್ಫ್ ಆಡಿರುವ ಸುದ್ದಿ ಸಾಕಷ್ಟು ಸದ್ದು ಮಾಡಿದೆ.

ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಕಾರ್ಲೊಸ್ ಅಲ್ಕಾರಾಜಾ ಹಾಗೂ ಅಲೆಕ್ಸಾಂಡರ್ ಜರ್ವೆವ್ ಅವರ ನಡುವೆ ನಡೆದಿದ್ದ ಕ್ವಾರ್ಟರ್‍ಫೈನಲ್ ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಎಂಎಸ್‍ಡಿ ಪಂದ್ಯ ವೀಕ್ಷಿಸಿ ಆನಂದಿಸಿದ್ದರು, ಈ ಸುದ್ದಿ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಡೊನಾಲ್ಡ್ ಟ್ರಂಪ್‍ರೊಂದಿಗೆ ಗಾಲ್ಫ್ ಆಡುವ ಮೂಲಕ ಧೋನಿ ಸುದ್ದಿ ಮಾಡಿದ್ದಾರೆ.

- Advertisement -

ಅಮೇರಿಕಾದಲ್ಲಿ ನಡೆಯುತ್ತಿ ರುವ ಯುಎಸ್ ಓಪನ್ ಪಂದ್ಯ ವೀಕ್ಷಿಸಲು ಹೋಗಿದ್ದ 2011ರ ವಿಶ್ವಕಪ್ ವಿಜೇತ ನಾಯಕ ಎಂ.ಎಸ್.ಧೋನಿಗೆ ಡೊನಾಲ್ಡ್ ಟ್ರಂಪ್ ಅವರು ಆಹ್ವಾನ ನೀಡಿದ್ದರು.

ಲೋಕಸಭೆ ಚುನಾವಣೆ ಬಳಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಬ್ರೇಕ್..?

ಈ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಗಾಲ್ಫ್ ಮೈದಾನದಲ್ಲಿ ಭೇಟಿಯಾದ ಎಂಎಸ್‍ಡಿ ಕೆಲವು ಹೊತ್ತು ಟ್ರಂಪ್‍ರೊಂದಿಗೆ ಗಾಲ್ ಆಡಿದರು. ನಂತರ ಎಂಎಸ್‍ಡಿ ಹಾಗೂ ಟ್ರಂಪ್ ಅವರು ಗಾಲ್ ದಿರಿಸಿನಲ್ಲಿ ಫೋಟೋಗೆ ಒಟ್ಟಿಗೆ ಪೋಸ್ ನೀಡಿದ್ದಾರೆ.ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಂ.ಎಸ್.ಧೋನಿ ಅವರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಅಪಾರ ಮೆಚ್ಚುಗೆಯು ವ್ಯಕ್ತವಾಗಿದೆ.

2023ನೇ ಸಾಲಿನ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ್ದ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಸಿಎಸ್‍ಕೆ 5ನೇ ಬಾರಿ ಟ್ರೋಫಿ ಗೆದ್ದು ರೋಹಿತ್‍ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್‍ನ ದಾಖಲೆ ಯನ್ನು ಸರಿಗಟ್ಟಿದೆ. ಎಂಎಸ್‍ಡಿಯ ಲವಲವಿಕೆ ನೋಡಿದರೆ 2024ರ ಐಪಿಎಲ್ ಟೂರ್ನಿಯಲ್ಲಿ ಆಡುವ ಸೂಚನೆ ಸಿಕ್ಕಿದೆ.

#MSDhoni, #Plays, #Golf, #DonaldTrump,

- Advertisement -
RELATED ARTICLES
- Advertisment -

Most Popular