ಕೇಂದ್ರದಿಂದ ಸಣ್ಣ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ

Social Share

ನವದೆಹಲಿ,ಮಾ.13- ಎಂಎಸ್‍ಎಂಇ ಸ್ಪರ್ಧಾತ್ಮಕ (ಲೀನ್) ಯೋಜನೆಯು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿರುವ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕಾ ವಲಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರಿಷ್ಕøತ ಎಂಎಸ್‍ಎಂಇ ಸ್ಪರ್ಧಾತ್ಮಕ (ಐಇಂಓ) ಯೋಜನೆಗೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿಯವರು ಉದ್ಯಮಗಳು ಮತ್ತು ಮಧ್ಯಸ್ಥಗಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲು ಇದು ಸಹಕಾರಿ ಎಂದಿದ್ದಾರೆ. ಪರಿಷ್ಕರಿಸಿದ ಯೋಜನೆಯಡಿಯಲ್ಲಿ ಎಂಎಸ್‍ಎಂಇ ಕ್ಷೇತ್ರವನ್ನು ಮೇಲೆತ್ತಲು ಹಿಂದೆ ಇದ್ದ ಅನುಷ್ಠಾನ ವೆಚ್ಚದ ಶೇ.80ರಷ್ಟು ರಿಯಾಯಿತಿಯನ್ನು ಶೇ.90ಕೆಕ ಹೆಚ್ಚಿಸಲಾಗಿದೆ.

ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್

ಎಂಎಸ್‍ಎಂಇ ಸಚಿವ ನಾರಾಯಣ ರಾಣೆ ಅವರ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ರಿಟ್ವೀಟ್ ಮಾಡಿದ್ದಾರೆ, ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಆಧಾರವಾಗಿರುವ ಎಂಎಸ್‍ಎಂಇ ವಲಯವನ್ನು ಬಲಪಡಿಸುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿ ಪರಿಷ್ಕøತ ಯೋಜನೆ ಜಾರಿಯಾಗಿದೆ ಎಂದು ಹೇಳಿದ್ದಾರೆ.

MSME, competitive, scheme, part, efforts, strengthen, sector, PM Modi,

Articles You Might Like

Share This Article